ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಯೊಂದು ಮನೆ ಬಾಗಿಲು ಹಾಗೂ ಹೊಸ್ತಿಲಿಗೆ ಹಿಂದು ಸಂಪ್ರದಾಯದಲ್ಲಿ ಬಹಳ ಮಹತ್ವವಿದೆ. ನಾವು ಯಾವುದೇ ಕೆಲಸದ ಮೇಲೆ ಹೊರಗೆ ಹೋದರೂ ಸಿಂಹದ್ವಾರದ ಮೂಲಕವೇ ಒಳಗೆ ಬರುತ್ತೇವೆ. ಮನೆಯ ಮುಖ್ಯ ದ್ವಾರ ಹಾಗೂ ಹೊಸ್ತಿಲು ಮನೆಯ ಮಾಲೀಕರ ಸಮೃದ್ಧಿಗೆ ಸಂಬಂಧಿಸಿದೆ. ಹೊಸ್ತಿಲಲ್ಲಿ ಲಕ್ಷ್ಮಿ ದೇವಿ ಇರುತ್ತಾಳೆ ಎಂಬು ಭಾರತೀಯರ ನಂಬಿಕೆ. ಅದಕ್ಕೇ ಅದರ ಮೇಲೆ ಕುಳಿತರೆ ಮನೆಯ ಹಿರಿಯರು ಬೈಯುತ್ತಾರೆ.
ಹೊಸ್ತಿಲು ಸನಾತನ ಧರ್ಮದ ಅಂಶಗಳ ಜೊತೆಗೆ, ವಾಸ್ತುವಿನೊಂದಿಗೆ ಸಂಬಂಧ ಹೊಂದಿವೆ. ಮನೆ ನಿರ್ಮಾಣ ಕೈಗೆತ್ತಿಕೊಂಡಾಗ ಮೊದಲು ಇಡುವುದೇ ಮುಖ್ಯ ದ್ವಾರ. ಆ ಸಮಯದಲ್ಲಿ ಮಾಡುವ ಪೂಜೆಯಲ್ಲಿ, ಬೇವಿನ ಎಣ್ಣೆಯನ್ನು ದ್ವಾರದ ಕೆಳಗೆ ಸುರಿದು, ಭಾಗವತಕ್ಕೆ ಸಂಬಂಧಿಸಿದ ಕೆಲವು ಯಂತ್ರಗಳನ್ನು ಇರಿಸಿ, ಅರಿಶಿನ, ಕುಂಕುಮ ಮತ್ತು ಹೂವುಗಳಿಟ್ಟು ಪೂಜಿಸಲಾಗುತ್ತದೆ.
ಮನೆಯ ಅಧಿಪತಿಯು ನಕ್ಷತ್ರಕ್ಕೆ ಅನುಗುಣವಾದ ದಿಕ್ಕಿನಲ್ಲಿ ಸಿಂಹದ್ವಾರವನ್ನು ಇರಿಸುತ್ತಾನೆ. ಅಂದರೆ ಮನೆಯ ಬಾಗಿಲು ಅವರ ಹೆಸರಿಗೆ ಯಾವ ದಿಕ್ಕು ಬರುತ್ತದೆಯೋ ಆ ದಿಕ್ಕಿಗೆ ದ್ವಾರವನ್ನು ಇಡುತ್ತಾನೆ. ಹಬ್ಬ ಹರಿದಿನಗಳಂತಲ್ಲ ಪ್ರತಿದಿನ ಬೆಳಗ್ಗೆ, ಸಂಜೆ ಹಿಸ್ತಿಲು ಪೂಜೆ ಹಿಂದು ಮನೆಗಳಲ್ಲಿ ಸಾಮಾನ್ಯ. ಹೊಸ್ತಿಲನ್ನು ತುಳಿಯುವುದ, ಅದರ ಮೇಲೆ ಕೂರುವುದು ಇದೆಲ್ಲವೂ ನಿಷಿದ್ಧ. ಯಾರಿಗಾದರೂ ಯಾವುದೇ ವಸ್ತು ಅಥವಾ ಹಣ ಕೊಡುವಾಗ ಹಿಸ್ತಿಲಿಂದ ಆಚೆ ಬಂದು ಕೊಡವುದು ವಾಡಿಕೆ. ಬಾಗಿಲ ಬಳಿ ಕುಳಿತು ಕಣ್ಣೀರು ಹಾಕಬಾರದು ಅಂತಾರೆ ಹಿರಿಯರು. ಇದು ಮನೆ ಯಜಮಾನನ ಶ್ರೇಯಸ್ಸಿಗೆ ಒಳ್ಳೆಯದಲ್ಲ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯ.