ಮುಸಲ್ಮಾನರ ಮೂಲವೇ ಹಿಂದು ಧರ್ಮ: ಗುಲಾಂ ನಬಿ ಆಜಾದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಿಂದು (Hindu) ಧರ್ಮವು ಇಸ್ಲಾಂ ಧರ್ಮಕ್ಕಿಂತ ಹಳೆಯದು… ಹೀಗೊಂದು ಮಾತು ಹೇಳಿದ್ದು ಕಾಂಗ್ರೆಸ್‌ನ (Congress) ಮಾಜಿ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) .

ಹೌದು, ದೋಡಾ ಜಿಲ್ಲೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮಗೆ ಕಾಶ್ಮೀರದ ಉದಾಹರಣೆ ಇದೆ. 600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಮುಸ್ಲಿಮರು ಇರಲಿಲ್ಲ. ಕಾಶ್ಮೀರಿ ಪಂಡಿತರು ಇಸ್ಲಾಂಗೆ ಮತಾಂತರಗೊಂಡರು. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಲ್ಲಿ ಇಸ್ಲಾಂ ಧರ್ಮ 1,500 ವರ್ಷಗಳ ಹಿಂದೆ ಬಂದಿತ್ತು. ಆದರೆ ಹಿಂದು ಧರ್ಮ ಬಹಳ ಹಳೆಯದು ಎಂದರು.

ಇದೀಗ ಅವರ ಹೇಳಿಕೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಇಸ್ಲಾಂ ಧರ್ಮ ಹೊರಗಿನಿಂದ ಬಂದಿರಬೇಕು, 10-20 ಜನರು ಮೊಘಲ್ ಸೈನ್ಯದಿಂದ ಬಂದಿರಬೇಕು. ಉಳಿದವರು ಹಿಂದು ಮತ್ತು ಸಿಖ್ ಧರ್ಮದಿಂದ ಮತಾಂತರಗೊಂಡಿದ್ದಾರೆ ಎಂದು ಹೇಳಿದ್ದಾರೆ.

ನಾವು ಹಿಂದುಗಳು, ಮುಸ್ಲಿಮರು, ದಲಿತರು, ಕಾಶ್ಮೀರಿಗಳಿಗಾಗಿ ರಾಜ್ಯವನ್ನು ನಿರ್ಮಿಸಿದ್ದೇವೆ. ಇದು ನಮ್ಮ ಭೂಮಿ. ಇಲ್ಲಿ ಯಾರೂ ಹೊರಗಿನಿಂದ ಬಂದಿಲ್ಲ ಎಂದು ಹೇಳಿದ್ದಾರೆ.

600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಮುಸಲ್ಮಾನರಾಗಿದ್ದವರು ಯಾರು? ಎಲ್ಲಾ ಕಾಶ್ಮೀರಿ ಪಂಡಿತರು ಇಸ್ಲಾಂಗೆ ಮತಾಂತರಗೊಂಡರು. ಹಾಗಾಗಿ ಎಲ್ಲರೂ ಹಿಂದು ಧರ್ಮದಲ್ಲಿ ಹುಟ್ಟಿದ್ದಾರೆ ಎಂಬ ಅರ್ಥದಲ್ಲಿ ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!