ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಶವಂತಪುರ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ (S.T.Somashekhar), ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾಗಲು ಬಯಸಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಬೆಂಬಲಿಗರ ಜೊತೆ ಸಭೆ ನಡೆಸಿದ ಅವರು, ಬಿಜೆಪಿಯೊಳಗಿನ ಸಮಸ್ಯೆಯನ್ನು ವರಿಷ್ಠರ ಜತೆ ಮಾತಾಡಿ ಸರಿಪಡಿಸುವೆ, ಹೀಗಾಗಿ ಸ್ವಲ್ಪ ಸಮಯ ಕೊಡಿ ಎಂದಿದ್ದಾರೆ.
ಹಾರೋಹಳ್ಳಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಎಸ್ಟಿ ಸೋಮಶೇಖರ್ ಸಭೆಯಲ್ಲಿ 50 ಕ್ಕೂ ಹೆಚ್ಚು ಬೆಂಬಲಿಗರು ಭಾಗಿಯಾಗಿದ್ದಾರೆ.
ಮೂಲ ಬಿಜೆಪಿಗರು ಎಸ್ಟಿ ಸೋಮಶೇಖರ್ ಅವರು ಬಿಜೆಪಿಯಲ್ಲಿ ಬೆಳೆಯಲು ಬಿಡುತ್ತಿಲ್ಲ ಎಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಚಿಕ್ಕರಾಜು ಎಂದು ಆರೋಪಿಸಿದ್ದಾರೆ. ನೀವು ಗೆಲ್ಲಲೂ ಅವರು ಕೆಲಸ ಮಾಡಲ್ಲ ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಹೋಗೋಣ ಎಂದು ಸಭೆಯಲ್ಲಿ ಹೇಳಿದ್ದೇವೆ. ಎರಡು ದಿನ ಸುಮ್ಮನಿರಿ, ಬಿಜೆಪಿ ವರಿಷ್ಠರ ಜೊತೆ ಮಾತಾಡಿ ಸರಿಪಡಿಸುತ್ತೇನೆ ಎಂದು ಸೋಮಶೇಖರ್ ಹೇಳಿದ್ದಾರೆ ಎಂದು ಎಂದಿದ್ದಾರೆ.
ಇದೀಗ ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿದ ಸೋಮಶೇಖರ್, ಪಕ್ಷ ಬಿಡುವ ಪ್ರಶ್ನೆ ಇಲ್ಲ, ಬಂದು ಮಾತಾಡುತ್ತೇನೆ ಎಂದಷ್ಟೇ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಹೇಳಿದ್ದೇನೆ ಎಂದಿದ್ದಾರೆ. ಅಲ್ಲದೆ, ಡಿಸಿಎಂ ನಮ್ಮ ಕ್ಷೇತ್ರದಲ್ಲಿ ಬಂದ ಬಳಿಕ ಏನೇನು ಬೆಳವಣಿಗೆ ಆಗಿದೆ ಅಂತಾ ಸಭೆಯಲ್ಲಿ ಬೆಂಬಲಿಗರಿಗೆ ಮಾಹಿತಿ ಕೊಟ್ಟಿದ್ದೇನೆ. ಆಗಿರುವ ಸಮಸ್ಯೆಗಳನ್ನು ಸರಿಪಡಿಸುವ ಬಗ್ಗೆ ವರಿಷ್ಠರು ಭರವಸೆ ಕೊಟ್ಟಿದ್ದೇನೆ, ಕಾಯೋಣ ಎಂದು ಬೆಂಬಲಿಗರಿಗೆ ಹೇಳಿದ್ದಾಗಿ ತಿಳಿಸಿದರು.
ಚುನಾವಣೆಗೆ ಮುನ್ನ ನನ್ನ ವಿರುದ್ಧ ಮಾತಾಡಿದ್ದು, ಹಣ ಹಂಚಿದ್ದು ಎಲ್ಲಾ ಇದೆ. ಆದರೆ ಇದರ ವಿರುದ್ಧ ಯಾವ ಕ್ರಮವೂ ಆಗಿಲ್ಲ. ಯಡಿಯೂರಪ್ಪ ನೇತೃತ್ವದಲ್ಲಿ ಒಂದು ಸಭೆ ಆಗಿದ್ದಾಗ ಕೂಡಾ ಇದರ ಬಗ್ಗೆ ನಾನು ಪ್ರಸ್ತಾಪ ಮಾಡಿದ್ದೆ. ನನ್ನ ಸೋಲಿಸಬೇಕು ಅಂತಾ ಹಣ ಹಂಚಿದವರೇ 10 ದಿನಗಳ ಹಿಂದೆ ನನ್ನ ಫೋಟೋ ಹಾಕಿಕೊಂಡು ಅವರ ಹುಟ್ಟುಹಬ್ಬ ಮಾಡಿದ್ದಾರೆ. ಇದನ್ನು ನಮ್ಮ ಬೆಂಬಲಿಗರು ಪ್ರಶ್ನೆ ಮಾಡಿದ್ದಕ್ಕೆ ಇಷ್ಟೆಲ್ಲಾ ಅವಾಂತರ ಆಗಿದೆ. ಈ ವಾತಾವರಣದಲ್ಲಿ ನಾನು ಪಕ್ಷದ ಸಂಘಟನೆ ಹೇಗೆ ಮಾಡಲಿ ಎಂದು ಪ್ರಶ್ನಿಸಿದರು.
ನನ್ನ ವಿರುದ್ಧ ಷಡ್ಯಂತರ ಮಾಡಿದ್ದವರು ಈಗ ಯಾವುದೇ ಪದಾಧಿಕಾರಿ ಅಲ್ಲ. ಅವರಿಗೆ ಎಚ್ಚರಿಕೆ ಕೊಡಿ ಎಂಬುದು ಅಷ್ಟೇ ನನ್ನ ಬೇಡಿಕೆ. ನನಗೂ ಮಾಜಿ ಸಚಿವ ವಿ. ಸೋಮಣ್ಣ ಫೋನ್ ಮಾಡಿದ್ದರು. ನಾನು ದೂರು ಕೊಟ್ಟಿದ್ದೇನೆ, ನೀನು ಕೂಡಾ ಲಿಖಿತ ದೂರು ಕೊಡು ಅಂತಾ ಹೇಳಿದ್ದರು. ಎಲ್ಲವನ್ನೂ ಸರಿಪಡಿಸುತ್ತೇನೆ ಅಂತಾ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅಲ್ಲಿಯವರೆಗೂ ಯಾವುದೇ ನಿರ್ಧಾರ ಮಾಡಬೇಡಿ ಎಂದು ಸಭೆಯಲ್ಲಿ ಹೇಳಿದ್ದಾಗಿ ತಿಳಿಸಿದರು.
ಎಲ್ಲರ ಮೇಲೆ ನಾವು ವಿಶ್ವಾಸ ಇಡಬೇಕಾಗುತ್ತದೆ. ಕಾಂಗ್ರೆಸ್ನಲ್ಲಿದ್ದಾಗ ಕಾಂಗ್ರೆಸ್ಗೇ ಕೆಲಸ ಮಾಡಿದ್ದೇನೆ, ಬಿಜೆಪಿಯಲ್ಲಿ ಬಿಜೆಪಿಗೆ ಕೆಲಸ ಮಾಡಿದ್ದೇನೆ. ನನ್ನ ಪ್ರಕಾರ ಯಾರೂ ಬೆಂಬಲಿಗರು ಕಾಂಗ್ರೆಸ್ಗೆ ಹೋಗಲ್ಲ ಎಂದು ಹೇಳಿದ ಸೋಮಶೇಖರ್, ಬಿಜೆಪಿಯಲ್ಲಿ ಎರಡು ಸುದ್ದಿಗೋಷ್ಠಿ ಹೊರತುಪಡಿಸಿ ಎಲ್ಲಾ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.