ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಮಹೇಶ್ ಬಾಬು ಮನೆಯಲ್ಲಿ ತಮ್ಮ ಮುದ್ದಿನ ಸಾಕು ನಾಯಿ ಸಾವನ್ನಪ್ಪಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟು ಸಕ್ರಿಯರಾಗಿರದ ಮಹೇಶ್ ತಮ್ಮ ಮುದ್ದಿನ ನಾಯಿ ಫೋಟೋ ಹಾಕಿ ಭಾವುಕರಾದರು.
ಮಹೇಶ್ ಅವರ ಮನೆಯಲ್ಲಿ ಎರಡು ಸಾಕು ನಾಯಿಗಳಿವೆ. ಅದರಲ್ಲಿ ಪ್ಲೂಟೊ ಎಂಬ ನಾಯಿಯೂ ಒಂದು. ಮಹೇಶ್ ಪತ್ನಿ ನಮ್ರತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ಲೂಟೊ ಸತ್ತಿದೆ ಎಂದು ಬರೆದುಕೊಂಡಿದ್ದು, ತಾನು ಪ್ಲೂಟೊವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ಮಗಳು ಸಿತಾರಾ ಸಹ ಪ್ಲೂಟೊ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಏಳು ವರ್ಷಗಳಿಂದ ನೀನು ನನ್ನ ಉತ್ತಮ ಸ್ನೇಹಿತ. ನಿನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಬೇಸರಪಡಬೇಡಿ ಗಟ್ಟಿಯಾಗಿ ಇರಿ ಎಂದು ಮಹೇಶ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ನಾಯಿ ಜೊತೆಗಿರುವ ಈ ಫೋಟೋವನ್ನು ಮಹೇಶ್ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ವೈರಲ್ ಆಗಿದೆ. ವಿದೇಶದಲ್ಲಿ ಇಷ್ಟು ದಿನ ಎಂಜಾಯ್ ಮಾಡಿದ ಮಹೇಶ್ ಬಾಬು ಇತ್ತೀಚೆಗಷ್ಟೇ ಭಾರತಕ್ಕೆ ಬಂದು ಗುಂಟೂರು ಕಾರಂ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.