ಕರ್ನಾಟಕ ಸರ್ಕಾರದಿಂದ NEP ರದ್ದು: ರಾಜಕೀಯ ಪ್ರೇರಿತ ನಿರ್ಧಾರ ಎಂದ ಕೇಂದ್ರ ಸಚಿವ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ಕೈಬಿಡಲು ನಿರ್ಧರಿಸಿದ್ದು, ಇದು ರಾಜಕೀಯ ಪ್ರೇರಿತ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan)ಟೀಕಿಸಿದ್ದಾರೆ.

ಯಾವಾಗಲು ಶಿಕ್ಷಣವು ರಾಜಕೀಯ ಸಾಧನವಾಗಿರದೆ ಪ್ರಗತಿಯ ದಾರಿದೀಪವಾಗಿ ಕಾರ್ಯನಿರ್ವಹಿಸಬೇಕು. ನಮ್ಮ ಶಿಕ್ಷಣ ವ್ಯವಸ್ಥೆಗೆ ವಿಕಸನದ ಅಗತ್ಯವಿದೆ, ಹಿಂಚಲನೆ ಅಲ್ಲಲ್ಲ. NEP ಎಲ್ಲರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ವರ್ಷಗಳ ಸಮಾಲೋಚನೆಯ ಫಲಿತಾಂಶವಾಗಿದೆ. ಕಾಂಗ್ರೆಸ್ ಪಕ್ಷ ಸುಧಾರಣೆ-ವಿರೋಧಿ, ಭಾರತೀಯ ಭಾಷಾ ವಿರೋಧಿ ಮತ್ತು ಕರ್ನಾಟಕ ವಿರೋಧಿ ಎಂಬುದನ್ನು ಈ ಕ್ರಮ ಪ್ರತಿಬಿಂಬಿಸುತ್ತಿದೆ ಎಂದು ಹೇಳಿದ್ದಾರೆ.

ನಮ್ಮಲ್ಲಿ ರಾಜಕೀಯ ವಿಚಾರಗಳಿಗಿಂತ ವಿದ್ಯಾರ್ಥಿಗಳು ಮತ್ತು ಅವರ ಕಲ್ಯಾಣಕ್ಕೆ ಆದ್ಯತೆ ನೀಡುವ ಮಹತ್ವವನ್ನು ಪ್ರಧಾನ್ ಒತ್ತಿ ಹೇಳಿದರು. ಅವರು ಕ್ಷುಲ್ಲಕ ರಾಜಕೀಯವನ್ನು ಬಿಟ್ಟು, ಪ್ರಗತಿ ಮತ್ತು ಒಳಗೊಳ್ಳುವಿಕೆಯನ್ನು ಮೌಲ್ಯೀಕರಿಸುವ ನಾಯಕತ್ವಕ್ಕಾಗಿ ಅವರು ಒತ್ತಾಯಿಸಿದ್ದಾರೆ.

ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಎನ್‌ಇಪಿ ರದ್ದುಗೊಳಿಸುವ ನಿರ್ಧಾರವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಪ್ರಕಟಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!