ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಷ್ಠಿತ ಕಂಪನಿಯಾದ ಪಾರಾಚ್ಯೂಟ್ ಮೆರಿಕೊ ಪ್ರೈವೇಟ್ ಕಂಪನಿ (ಕೊಬ್ಬರಿಯಣ್ಣಿ) ಹೆಸರಿನಲ್ಲಿ ನಕಲಿ ತಯಾರಿಸುತ್ತಿದ್ದ ಘಟಕದ ಮೇಲೆ ಪೊಲೀಸರು ಶುಕ್ರವಾರ ದಾಳಿ ನಡೆಸಿ ಅಪಾರ ಪ್ರಮಾಣದ ಕೊಬ್ಬರಿಯಣ್ಣಿ ಬಾಕ್ಸ್ ಗಳನ್ನು ವಶಕ್ಕೆ ಪಡೆದು ಬೀಗ ಜಡಿದ ಘಟನೆ ನಗರದ ಕಂಬಳಿ ಬಜಾರ್ ನಲ್ಲಿ ನಡೆದಿದೆ.
ಪ್ಯಾರಾಚೂಟ್ ಮೆರಿಕೊ ಕಂಪನಿಯ ಪ್ರತಿನಿಧಿ, ಬೆಂಗಳೂರು ನಿವಾಸಿ ಸೋಮಸುಂದರಂ ಅವರು ನೀಡಿದ ಲಿಖಿತ ದೂರಿನ ಅನ್ವಯ ಇಲ್ಲಿನ ಬ್ರೂಸ್ ಪೇಟೆ ಠಾಣೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ದಾಳಿ ನಡೆಸಿ ಬೀಗ ಜಡಿದು ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.
ನಗರದ ಕಂಬಳಿ ಬಜಾರ್ ಪ್ರದೇಶದ ಉದ್ಯಮಿ ರಾಜಲಕ್ಷ್ಮೀ ಎನ್ನುವ ಅಂಗಡಿಯಲ್ಲಿ ನಕಲಿಯಾಗಿ ಎಣ್ಣಿ ತಯಾರಿಸಿ ಮಾರಾಟ ಮಾಡುತ್ತಿದ್ದರು ಎನ್ನುವ ದೂರು ಹಿನ್ನೆಲೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.