Monday, December 22, 2025

Oral Health | ಹಲ್ಲುಜ್ಜಿದ ನಂತರ ಈ ಒಂದು ತಪ್ಪು ಮಾಡಿದ್ರೆ ನಿಮ್ಮ ಆರೋಗ್ಯವೇ ಹಾಳಾಗಬಹುದು ಹುಷಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಿದಿನ ಬೆಳಗ್ಗೆ ಹಲ್ಲುಜ್ಜುವುದು ನಮಗೆ ಸಹಜವಾದ ಅಭ್ಯಾಸ. ಆದರೆ ಹಲ್ಲುಜ್ಜಿದ ಬಳಿಕ ನಾವು ಮಾಡುವ ಒಂದು ಸಣ್ಣ ಅಜಾಗರೂಕತೆ ನಿಧಾನವಾಗಿ ದೊಡ್ಡ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ವಿಶೇಷವಾಗಿ ಟೂತ್‌ಬ್ರಷ್ ಅನ್ನು ಹೇಗೆ ಸಂಗ್ರಹಿಸುತ್ತೇವೆ ಎಂಬುದು ಬಾಯಿಯ ಆರೋಗ್ಯದಿಂದ ಹಿಡಿದು ಜೀರ್ಣಾಂಗ ವ್ಯವಸ್ಥೆಯವರೆಗೂ ಪ್ರಭಾವ ಬೀರುತ್ತದೆ. ಸ್ವಚ್ಛತೆ ಬಗ್ಗೆ ಜಾಗರೂಕರಾಗದೆ ಇದ್ದರೆ, ನಾವೇ ತಿಳಿಯದೇ ಬ್ಯಾಕ್ಟೀರಿಯಾಗಳಿಗೆ ಆಹ್ವಾನ ನೀಡಿದಂತಾಗುತ್ತದೆ.

  • ಬ್ರಷ್ ಒದ್ದೆಯಾಗಿ ಇಡುವುದು ಅಪಾಯಕಾರಿ: ಹಲ್ಲುಜ್ಜಿದ ನಂತರ ಬ್ರಷ್ ಅನ್ನು ಸರಿಯಾಗಿ ತೊಳೆಯದೇ ಅಥವಾ ಒದ್ದೆಯಾದ ಸ್ಥಿತಿಯಲ್ಲೇ ಇಡುವುದು ಬ್ಯಾಕ್ಟೀರಿಯಾ ಬೆಳವಣಿಗೆಗೆ ಸೂಕ್ತ ವಾತಾವರಣವನ್ನು ಸೃಷ್ಟಿಸುತ್ತದೆ. ತೇವಾಂಶ ಇರುವ ಬ್ರಷ್ ಮೇಲೆ ಹಾನಿಕಾರಕ ಜೀವಾಣುಗಳು ವೇಗವಾಗಿ ಹೆಚ್ಚಾಗುತ್ತವೆ.
  • ಮುಚ್ಚಿದ ಕವರ್‌ನಲ್ಲಿ ಇಡುವ ಅಭ್ಯಾಸ ಬಿಡಿ: ಅನೇಕರು ಬ್ರಷ್ ಅನ್ನು ಸಣ್ಣ ಮುಚ್ಚಳ ಅಥವಾ ಪೆಟ್ಟಿಗೆಯಲ್ಲಿ ಇಡುತ್ತಾರೆ. ಆದರೆ ಇದು ಸರಿಯಾದ ವಿಧಾನವಲ್ಲ. ಗಾಳಿ ಹರಿಯದ ಮುಚ್ಚಿದ ಜಾಗದಲ್ಲಿ ಬ್ಯಾಕ್ಟೀರಿಯಾ ಹೆಚ್ಚು ದಿನ ಜೀವಿಸುವ ಸಾಧ್ಯತೆ ಇದೆ.
  • ಸರಿಯಾದ ಸಂಗ್ರಹ ವಿಧಾನ ಏನು?: ಬ್ರಷ್ ಅನ್ನು ಚೆನ್ನಾಗಿ ನೀರಿನಿಂದ ತೊಳೆದು, ಸಂಪೂರ್ಣವಾಗಿ ಒಣಗಲು ಬಿಡಬೇಕು. ಗಾಳಿಯಲ್ಲಿ ಒಣಗಿದ ನಂತರ ಮಾತ್ರ ತೆರೆದ ಬ್ರಷ್ ಸ್ಟ್ಯಾಂಡ್‌ನಲ್ಲಿ ಇಡುವುದು ಆರೋಗ್ಯಕರ.
  • ಬಾಯಿಯ ಆರೋಗ್ಯ = ಕರುಳಿನ ಆರೋಗ್ಯ: ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಹೊಟ್ಟೆಗೆ ಪ್ರವೇಶಿಸಿದರೆ ಗ್ಯಾಸ್, ಅಜೀರ್ಣ ಮತ್ತು ಮಲಬದ್ಧತೆ ಉಂಟಾಗಬಹುದು. ಹೀಗಾಗಿ ಸ್ವಚ್ಛ ಬ್ರಷ್ ಬಳಕೆ ಅತ್ಯಗತ್ಯ.
  • ದಿನಕ್ಕೆ ಎರಡು ಬಾರಿ ಬ್ರಷ್ ಮಾಡುವುದು ಉತ್ತಮ: ರಾತ್ರಿ ಮಲಗುವ ಮುನ್ನ ಹಲ್ಲುಜ್ಜುವುದರಿಂದ ಬ್ಯಾಕ್ಟೀರಿಯಾ ನಿಯಂತ್ರಣಕ್ಕೆ ಬರುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
error: Content is protected !!