ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಪತ್ರೆಯಲ್ಲಿ ವೈದ್ಯರ ನಂತರ ನಂಬಿಕಸ್ಥ ಸ್ಥಾನ ಪಡೆದಿರುವುದು ನರ್ಸ್‌ಗಳು, ಅವರು ಆರೈಕೆ ಮಾಡುವ ರೀತಿಗೆ ಅವರನ್ನು ನಂಬೋದೆ ಇರೋದು ಅಸಾಧ್ಯ. ಆದರೆ ಯುಕೆಯ ನರ್ಸ್ ಹಸುಗೂಸುಗಳ ಜೀವ ತೆಗೆದಿದ್ದಾಳೆ.
ಹೌದು, ನರ್ಸ್ ಲೂಸಿ ಲೆಟ್ಟಿ ಈಗಾಗಲೇ ಏಳು ಹಸುಗೂಸುಗಳ ಪ್ರಾಣ ತೆಗೆದಿದ್ದಾಳೆ. ಅಷ್ಟೇ ಅಲ್ಲದೆ ಇನ್ನೂ ಆರು ಮಕ್ಕಳನ್ನು ಕೊಲ್ಲುವ ಪ್ರಯತ್ನ ಮಾಡುತ್ತಿದ್ದಳು. ಈ ವೇಳೆ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಶಿಫ್ಟ್‌ನಲ್ಲಿ ಅನಾರೋಗ್ಯ ಕಾಡಿದ್ದ ಮಕ್ಕಳ ಆರೈಕೆ ವೇಳೆ ಇಂಜೆಕ್ಷನ್ ಕೊಟ್ಟು ಜತೆಗೆ ಹೊಡೆದು ಸಾಯಿಸಿದ್ದಾಳೆ. ಆಕೆಯ ಮನೆಯಲ್ಲಿ ನಾನು ಕೆಟ್ಟವಳು, ತಪ್ಪು ಮಾಡಿದ್ದು ನಾನೇ, ನಾನು ಹೀಗೆ ಇರೋದು ಎಂಬೆಲ್ಲಾ ಬರಹಗಳು ಸಿಕ್ಕಿವೆ.
ಇನ್ನೆರಡು ದಿನದಲ್ಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಲಿದೆ. ಜೀವ ಉಳಿಸಬೇಕಾದ್ದ ನರ್ಸ್ ಜೀವ ತೆಗೆದಿದ್ದು, ಅವರಿಗೆ ಕಠಿಣ ಶಿಕ್ಷೆ ನೀಡಿ ಎಂದು ಜನರು ಆಗ್ರಹಿಸಿದ್ದಾರೆ.