ಹೊಸ ದಿಗಂತ ವರದಿ, ಮುಂಡಗೋಡ:
ಸರಕಾರ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಅಡುಗೆ ಸಹಾಯಕಿಯೊಬ್ಬರು ಬಿಸಿ ಸಾಂಬಾರ ಪಾತ್ರೆಯನ್ನು ಎತ್ತಿಕೊಂಡು ಬರುವ ಸಮಯದಲ್ಲಿ ಕಾಲುಜಾರಿ ಬಿದ್ದು ಸಾಂಬಾರ ಪಾತ್ರೆಯನ್ನು ಮೈಮೇಲೆ ಹಾಕಿಕೊಂಡು ಸುಟ್ಟುಕೊಂಡಿರುವ ಘಟನೆ ಶನಿವಾರ ನಡೆದಿದೆ.
ಅನ್ನಪೂರ್ಣ ಹುಳ್ಯಾಳ (49) ಅಡುಗೆ ಸಹಾಯಕಿಯಾಗಿದ್ದು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಡ ಶಾಲಾ ವಿಭಾಗದಲ್ಲಿ ಅಡುಗೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.
ಶನಿವಾರ ಮಧ್ಯಾಹ್ನದ ಬಿಸಿ ಊಟ ತಯಾರಿ ಮಾಡಿ ಅನ್ನಪೂರ್ಣ ಹಾಗೂ ಇನ್ನೊಬ್ಬ ಅಡುಗೆ ಸಹಾಯಕಿ ಪಾರ್ವತಿ ಸೇರಿ ಶಾಲೆಯಲ್ಲಿ ಬಿಸಿ ಸಾಂಬಾರ ಪಾತ್ರೆಯನ್ನು ಎತ್ತಿಕೊಂಡು ಬರುವ ಸಮಯದಲ್ಲಿ ಅನ್ನಪೂರ್ಣ ಈಕೆಯ ಕಾಲು ಜಾರಿ ಸಾಂಬಾರ ಪಾತ್ರೆ ಮೈಮೇಲೆ ಬಿದ್ದ ಪರಿಣಾಮ ದೇಹವು 50% ಭಾಗ ಸುಟ್ಟಿದೆ. ತಕ್ಷಣವೇ ಮುಂಡಗೋಡ ತಾಲೂಕಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.