ದಿನದಲ್ಲಿ ಬೆಳಗ್ಗೆ ಸಮಯ ತುಂಬಾನೇ ಅಮೂಲ್ಯ. ಒಂದು ದಿನವನ್ನು ನೀವು ಹೇಗೆ ಆರಂಭಿಸುತ್ತೀರ ಎನ್ನುವುದರ ಮೇಲೆ ನಿಮ್ಮ ಇಡೀ ದಿನ ನಿರ್ಧರಿತವಾಗುತ್ತದೆ. ಬೆಳಗ್ಗೆ ಮನೆಯಲ್ಲಿ ಯಾರಾದರೂ ಬೈದರೆ ಬೆಳಗ್ಗೆಯೇ ಬೈಬೇಡ ಎಂದು ಕೂಗಾಡ್ತೀರಿ, ನಿಮ್ಮ ಮೂಡ್ ಕೂಡ ಹಾಳಾಗುತ್ತದೆ. ಪ್ರತಿ ದಿನ ಈ ಒಂಬತ್ತು ಅಭ್ಯಾಸಗಳನ್ನು ಮಾಡಿಕೊಳ್ಳಿ.. ನಿಮ್ಮ ಜೀವನ ಬದಲಾಗದಿದ್ರೆ ಕೇಳಿ..
- ಅಲಾರಾಂ ಕ್ಲಾಕ್ ಅಥವಾ ಮೊಬೈಲ್ನ್ನು ನಿಮ್ಮ ಕೈಗೇ ಸಿಗುವ ಹಾಗೆ ಇಟ್ಟುಕೊಂಡು ಮಲಗಬೇಡಿ, ಸ್ವಲ್ಪ ದೂರದಲ್ಲಿ ಇಡಿ, ಅದನ್ನು ಆಫ್ ಮಾಡಲು ಎದ್ದು ಹೋಗಲೇಬೇಕಲ್ವಾ?
- ಬೆಳಗ್ಗೆ ಎದ್ದು ಮೊಬೈಲ್ ನೋಡುವ ಬದಲು ಬೆಡ್ ಮೇಲೆ ಕುಳಿತು ಒಂದು ಪುಟ ನಿಮ್ಮಿಷ್ಟದ ಪುಸ್ತಕ ಓದು, ಸ್ಫೂರ್ತಿ ಸಿಕ್ಕೇ ಸಿಗುತ್ತದೆ.
- ಬೆಳಗ್ಗೆ ಎದ್ದ ನಂತರ ಹಾಸಿಗೆಯನ್ನು ಸರಿಮಾಡಿ, ಬೆಡ್ಶೀಟ್ ಮಡಚಿ, ಹಾಸಿಗೆ ಕೊಡವಿ ವಾಪಾಸ್ ಕ್ಲೀನ್ ಮಾಡಿ ಮುಂದಿನ ಕೆಲಸ ಮಾಡಿ.
- ಇಂದು ಏನೆಲ್ಲಾ ಮಾಡಬೇಕು, ಒಂದು ಲಿಸ್ಟ್ ಮಾಡಿ ಬರೆದಿಡಿ. ಆ ಕೆಲಸಗಳನ್ನು ಇಂದು ಮಾಡಿ ಮುಗಿಸಿ.
- ಬೆಳಗ್ಗೆಯೇ ಎದ್ದ ನಂತರ ಕಿಟಕಿ, ಬಾಗಿಲುಗಳನ್ನು ತೆಗೆದು ಒಳ್ಳೆಯ ಗಾಳಿ ಬೆಳಕು ಒಳಗೆ ಬರಲು ಬಿಡಿ
- ಪ್ರತಿ ದಿನ ಒಂದೇ ಸಮಯಕ್ಕೆ ಏಳಬೇಕು, ಕನ್ಸಿಸ್ಟೆನ್ಸಿ ಮುಖ್ಯ.
- ಬೆಳಗ್ಗೆ ವ್ಯಾಯಾಮ, ಜಿಮ್, ಯೋಗ, ವಾಕ್ ಯಾವುದಾದರೂ ಒಂದು ಮಾಡಬೇಕು.
- ಬೆಳಗ್ಗೆ ಎದ್ದ ತಕ್ಷಣ ಫೋನ್ ಮುಟ್ಟದೇ ಇರುವುದು ಬೆಸ್ಟ್ಉ
- ತ್ತಮವಾದ ಆಹಾರ ತಿನ್ನುವುದು ಬೆಸ್ಟ್, ಬೆಳಗ್ಗೆ ಆರೋಗ್ಯಕರ ತಿಂಡಿ ಮಾಡಿಕೊಂಡು ಯಾವುದೇ ಒತ್ತಡ ಇಲ್ಲದೆ ಸೇವಿಸಿ