ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಲ್ಯಾಪ್ಟಾಪ್ನ್ನೇ ಗುರಿಮಾಡಿಕೊಂಡಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಮೂಲದ ಇಬ್ಬರು ಕಳ್ಳರು ಬಸ್ನಲ್ಲಿ ಪ್ರಯಾಣಿಸುತ್ತಾ ಜನ ನಿದ್ದೆ ಹೋದಾಗ ಅವರ ಲ್ಯಾಪ್ಟಾಪ್ ಕದ್ದು ಪರಾರಿಯಾಗಿದ್ದಾರೆ. ಕೊಡಿಗೇಹಳ್ಳಿ ಪೊಲೀಸರು ಕಳ್ಳರನ್ನು ಬಂಧಿಸಿದ್ದು, 39 ಲ್ಯಾಪ್ಟಾಪ್ ವಶಕ್ಕೆ ಪಡೆದಿದ್ದಾರೆ.
ಪ್ರಯಾಣಿಕರಂತೆ ಬಸ್ ಏರಿ, ಯಾರ ಬಳಿ ಲ್ಯಾಪ್ಟಾಪ್ ಇದೆ ಎಂದು ಸೈಲೆಂಟ್ ಆಗಿ ಲೆಕ್ಕ ಹಾಕಿ, ಪ್ರಯಾಣಿಕರು ಮಲಗಿದ ನಂತರ ಲ್ಯಾಪ್ಟಾಪ್, ಫೋನ್ ಕದ್ದು ಮುಂದಿನ ನಿಲ್ದಾಣದಲ್ಲಿ ಇಳಿದುಕೊಳ್ಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.