ಬಾಲಿವುಡ್ ನಟ ಪಂಕಜ್ ತ್ರಿಪಾಠಿ ತಂದೆ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನಟ ಪಂಕಜ್ ತ್ರಿಪಾಠಿ(Pankaj Tripathi), ತಂದೆ ಪಂಡಿತ್ ಬನಾರಸ್ ತ್ರಿವಾರಿ (99) ಅವರು ವಿಧಿವಶರಾಗಿದ್ದಾರೆ.

ಉತ್ತರಖಂಡ್‌ನಲ್ಲಿ ಸಿನಿಮಾವೊಂದರ ಶೂಟಿಂಗ್‌ನಲ್ಲಿ ಪಂಕಜ್ ಬ್ಯುಸಿಯಿದ್ದರು. ತಂದೆಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಊರಿಗೆ ನಟ ತೆರಳಿದ್ದಾರೆ. ಸಾಕಷ್ಟು ಸಮಯದಿಂದ ನಟ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. 99ನೇ ವಯಸ್ಸಿಗೆ ಪಂಕಜ್ ತಂದೆ ಸೋಮವಾರ (ಆಗಸ್ಟ್ 21) ನಿಧನರಾಗಿದ್ದಾರೆ. ಬಿಹಾರ್‌ನ ಬೆಲ್ಸಾಂಡ್‌ನಲ್ಲಿ ಪಂಕಜ್ ತ್ರಿಪಾಠಿ ತಂದೆ ಅಂತ್ಯಕ್ರಿಯೆ ನಡೆದಿದೆ.

ಹಿಂದಿ ಸಿನಿಮಾಗಳ ಮೂಲಕ ಸಿನಿಪ್ರೇಕ್ಷಕರಿಗೆ ಪರಿಚಿತರಾಗಿರುವ ಪಂಕಜ್ ತ್ರಿಪಾಠಿ ಅವರು ಇತ್ತೀಚಿಗೆ ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಓ ಮೈ ಗಾಢ್ 2’ನಲ್ಲಿ (OMG 2) ನಟಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here