ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಮದುವೆಗಳು ನಡೆಯುತ್ತಿವೆ. ಒಂದೋ ಎರಡೋ ಚಿತ್ರ ಮಾಡಿದ ನಾಯಕಿಯರಿಂದ ಹಿಡಿದು, ಸ್ಟಾರ್ ನಟಿಯರೂ ಹಸೆಮಣೆ ಏರುತ್ತಿದ್ದಾರೆ. ಈ ಕ್ರಮದಲ್ಲಿ ಚಿತ್ರರಂಗದ ಮತ್ತೊಬ್ಬ ಸ್ಟಾರ್ ಹೀರೋಯಿನ್ ಯಾರಿಗೂ ತಿಳಿಯದಂತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಮುದ್ದಾದ ವಾಯ್ಸ್‌ನೊಂದಿಗೆ ಎಲ್ಲರನ್ನು ಮೋಡಿ ಮಾಡುವ ನಟಿ ನಿತ್ಯಾ ಮೆನನ್ ಮದುವೆಯಾಗುತ್ತಿದ್ದಾರೆ ಎಂಬ ಗುಸುಗುಸು ಕೇಳುತ್ತಿದೆ. ನಿತ್ಯಾ ಮೆನನ್ ಗಾಯಕಿ ಹಾಗೂ ನಾಯಕಿಯಾಗಿ ವಿಶೇಷ ಮನ್ನಣೆ ಗಳಿಸಿದ್ದಾರೆ. ತನ್ನ ಬಾಲ್ಯದ ಗೆಳೆಯನಾಗಿರುವ ಸ್ಟಾರ್ ಹೀರೋನನ್ನು ಮದುವೆಯಾಗಲಿದ್ದಾರೆ ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದಕ್ಕೂ ಮೊದಲೇ ನಿತ್ಯಾ ಮೆನನ್ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಈ ಬಾರಿ ನಿತ್ಯಾ ಮೆನನ್ ಮದುವೆ ಸುದ್ದಿ ಮಲಯಾಳಂ ಇಂಡಸ್ಟ್ರಿಯಲ್ಲಿ ಟ್ರೆಂಡ್ ಆಗಿದ್ದು, ಇದರೊಂದಿಗೆ ನಿತ್ಯಾ ಮೆನನ್ ಮದುವೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಮೇಲಾಗಿ ಕೆಲ ದಿನಗಳಿಂದ ನಿತ್ಯಾ ಮೆನನ್ ನಡುವಳಿಕೆಯಲ್ಲಿಯೂ ಸ್ವಲ್ಪ ವ್ಯತ್ಯಾಸ ಕಂಡುಬಂದಿದ್ದು, ಮದುವೆ ಸೆಟ್ಟಾಗಿರಬಹುದು ಅಂತಿದಾರೆ ಅಭಿಮಾನಿಗಳು.