ಅದೆಷ್ಟೋ ಆಹಾರಗಳನ್ನು ಹೆಲ್ತಿ ಎಂದು ಪ್ರತಿದಿನ ನಾವು ಸೇವಿಸ್ತಿದ್ದೇವೆ. ಆದರೆ ಅದ್ಯಾವುದೂ ನೀವು ಅಂದುಕೊಂಡಷ್ಟು ಹೆಲ್ತಿ ಅಲ್ವೇ ಅಲ್ಲ. ಯಾವ ಆಹಾರ ನೋಡಿ..
ಬ್ರೆಡ್
ಬ್ರೆಡ್ ಉತ್ತಮ ಆಹಾರ, ರೋಗಿಗಳಿಗೂ ಸುಲಭವಾಗಿ ಜೀರ್ಣವಾಗುತ್ತದೆ ಎಂದು ಹಾಲು ಬ್ರೆಡ್ ನೀಡಲಾಗುತ್ತದೆ. ಆದರೆ ಬ್ರೆಡ್ ಖಂಡಿತಾ ಹೆಲ್ತಿ ಅಲ್ಲ, ಅದರಲ್ಲಿರುವುದು ಮೈದಾ, ಮೈದಾ ಜೀರ್ಣಕ್ರಿಯೆ ಕಷ್ಟವಾಗುವಂತೆ ಮಾಡುತ್ತದೆ. ಮಲ್ಟಿ ಗ್ರೇನ್ ಬ್ರೆಡ್, ವೀಟ್ ಬ್ರೆಡ್ ಎಂದು ಬರೆದಿದ್ದರೂ ಒಮ್ಮೆ ಇಂಗ್ರೀಡಿಯಂಟ್ಸ್ ನೋಡಿ, ಅದರಲ್ಲಿ ರೀಫೈನ್ಡ್ ಹೋಲ್ ವೀಟ್ (ಮೈದಾ) ಎಂದು ಬರೆದಿದ್ರೆ ಅದನ್ನು ಅವಾಯ್ಡ್ ಮಾಡಿ.
ಯೋಗರ್ಟ್
ಯೋಗರ್ಟ್ ತುಂಬಾನೇ ಹೆಲ್ತಿ, ದಿನವೂ ಯೋಗರ್ಟ್ ತಿನ್ನಬೇಕು ಎಂದು ಹೇಳಲಾಗುತ್ತದೆ. ಆದರೆ ಫ್ಲೇವರ್ ಹಾಕಿರುವ ಯೋಗರ್ಟ್‌ನ್ನು ದಿನವೂ ತಿಂದರೆ ತೂಕ ಹೆಚ್ಚಾಗುತ್ತದೆ. ಅದರಲ್ಲಿ ಸಕ್ಕರೆ, ಆರ್ಟಿಫಿಶಿಯಲ್ ಫ್ಲೇವರ್ ಹೆಚ್ಚಾಗಿರುತ್ತದೆ. ಹಾಗಾಗಿ ಮನೆಯಲ್ಲೇ ಒಂದು ಬೌಲ್ ಮೊಸರು ತಿಂದುಬಿಡಿ.
ಎನರ್ಜಿ ಬಾರ್
ಎನರ್ಜಿ ಬಾರ್‌ಗಳನ್ನು ತಿಂದು ಜಿಮ್‌ನಲ್ಲಿ ವರ್ಕೌಟ್ ಮಾಡುವ ಎಷ್ಟು ಜನರನ್ನು ನೋಡಿಲ್ಲ. ಹಸಿವಾದರೆ ಊಟ ಮಾಡುವ ಬದಲು ಎನರ್ಜಿ ಬಾರ್ ತಿಂತಾರೆ ಆದರೆ ಇದರಲ್ಲಿ ಏನೆಲ್ಲಾ ಇದೆ, ಇದರಲ್ಲಿ ಸಕ್ಕರೆ, ಫ್ಯಾಟ್, ಚಾಕೋಲೆಟ್ ಇದೆ.
ಡ್ರೈಡ್ ಫ್ರೂಟ್ಸ್
ಡ್ರೈ ಫ್ರೂಟ್ಸ್ ಅಲ್ಲ, ಒಣಗಿಸಿದ ಹಣ್ಣುಗಳನ್ನು ಮಾಲ್‌ನಲ್ಲಿ ನೋಡಿದ್ದೀರಿ ಅಲ್ವಾ? ಒಣಗಿಸಿದ ಕ್ರ್ಯಾನ್‌ಬೆರಿ, ಬ್ಲೂಬೆರಿ, ಕಿವಿ ಇವುಗಳನ್ನು ಸಏವಿಸಬೇಡಿ, ಸಕ್ಕರೆ ಪಾಕದಲ್ಲಿ ಅದ್ದಿ ಇದನ್ನು ಡ್ರೈ ಮಾಡಿರುತ್ತಾರೆ.
ಓಟ್ಸ್, ಹೈ ಫೈಬರ್ ಬಿಸ್ಕೆಟ್ಸ್
ಹೈ ಫೈಬರ್ ಇರುವ ಬಿಸ್ಕೆಟ್ ಎಂದು ಸೇವಿಸುವ ಮುನ್ನ ಒಮ್ಮೆ ಇಂಗ್ರೀಡಿಯಂಟ್ಸ್ ಚೆಕ್ ಮಾಡಿ, ಇದರಲ್ಲಿರೋದು ಬರೀ 70% ಮೈದಾ, ಸಕ್ಕರೆ!