ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದ್ರಯಾನ ೩ ಚಂದ್ರನ ಮೇಲ್ಮೈನಲ್ಲಿ ವಿಕ್ರಮ್ ಲ್ಯಾಂಡರ್ ಉಪಗ್ರಹ ಲ್ಯಾಂಡ್ ಮಾಡಲು ಇನ್ನು ಕೆಲವೇ ಕ್ಷಣ ಬಾಕಿ ಉಳಿದಿದ್ದು, ಇಸ್ರೋಸಕಲ ಸಿದ್ಧತೆ ಮಾಡಿದೆ.
ಈ ವಿಶೇಷ ಕ್ಷಣಕ್ಕಾಗಿ ಇಡೀ ವಿಶ್ವ ಕಾತುರದಿಂದ ಕಾಯುತ್ತಿದ್ದು, ಆಗಸ್ಟ್ 23ರ ಸಂಜೆ 6.04 ಗಂಟೆಗೆ ವಿಕ್ರಮ ಲ್ಯಾಂಡರ್ ಇಳಿಸಲು ಇಸ್ರೋ ತಯಾರಿ ನಡೆಸಿದೆ.
ಈ ಕ್ಷಣ ಪ್ರಧಾನಿ ಮೋದಿ ಅವರು ಸೌತ್ ಆಫ್ರಿಕಾದಲ್ಲಿ ಇರುವ ಕಾರಣ ಇಸ್ರೋ ಕಾರ್ಯಾಚರಣ ನೇರ ಪ್ರಸಾರದಲ್ಲಿ ಸೌತ್ ಆಫ್ರಿಕಾದಿಂದ ಪಾಲ್ಗೊಳ್ಳಲಿದ್ದಾರೆ.
15ನೇ ಬ್ರಿಕ್ಸ್ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಸೌತ್ ಆಫ್ರಿಕಾದ ಜೋಹಾನ್ಸ್‌ಬರ್ಗ್ ತಲುಪಿದ್ದಾರೆ. ಹೀಗಾಗಿ ಸೌತ್ ಆಫ್ರಿಕಾದಿಂದಲೇ ಮೋದಿ ವರ್ಚುವಲ್ ಆಗಿ ಲ್ಯಾಂಡಿಂಗ್ ವೀಕ್ಷಣೆ ಮಾಡಲಿದ್ದಾರೆ.