`ಚಂದ್ರಯಾನ-3′ ಯಶಸ್ವಿ ಲ್ಯಾಂಡಿಂಗ್‌ಗಾಗಿ ಭಾರತದ ಜೊತೆಗೆ ಪ್ರಪಂಚದಾದ್ಯಂತ ಪ್ರಾರ್ಥನೆ, ಹೋಮ-ಹವನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್‌ಗಾಗಿ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಪ್ರಾರ್ಥನೆಗಳು ಪ್ರತಿಧ್ವನಿಸುತ್ತಿವೆ. ಧಾರ್ಮಿಕ ಗಡಿಗಳನ್ನು ಲೆಕ್ಕಿಸದೆ, ಚಂದ್ರಯಾನ-3 ಮಿಷನ್‌ಗೆ ತಮ್ಮ ಬೆಂಬಲ ವ್ಯಕ್ತಪಡಿಸಲು ಒಗ್ಗೂಡುತ್ತಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಕಾರ, ಚಂದ್ರಯಾನ-3 ಇಂದು ಚಂದ್ರನ ಮೇಲೆ ಇಳಿಯಲು ಸಿದ್ಧವಾಗಿದೆ, ಸಂಜೆ ಸಮಯ 18:04 (6 ಗಂಟೆ 4ನಾಲ್ಕು ನಿಮಿಷ)ಎಂದು ಇಸ್ರೋ ಹೇಳಿದೆ.

ಋಷಿಕೇಶದ ಪರಮಾರ್ಥ ನಿಕೇತನದಿಂದ ಹಿಡಿದು ಯುನೈಟೆಡ್ ಸ್ಟೇಟ್ಸ್‌ವರೆಗೆ, ಚಂದ್ರಯಾನ-3 ರ ಯಶಸ್ಸಿಗೆ ವಿಶೇಷ ಆಚರಣೆಗಳು, ಪ್ರಾರ್ಥನೆಗಳನ್ನು ನಡೆಸಲಾಗುತ್ತಿದೆ.

ಗಂಗಾ ಆರತಿಯನ್ನು ಭಾರತದ ಚಂದ್ರಯಾನಕ್ಕೆ ಸಮರ್ಪಿಸಲಾಯಿತು. ಋಷಿಕೇಶದ ಪರಮಾರ್ಥ ನಿಕೇತನ ಘಾಟ್‌ನಲ್ಲಿ ಕೈಯಲ್ಲಿ ತ್ರಿವರ್ಣ ಧ್ವಜದೊಂದಿಗೆ ಗಂಗಾರತಿ ಮಾಡಲಾಯಿತು.  ಆರತಿಗೂ ಮುನ್ನ ಘಾಟ್‌ನಲ್ಲಿ ಚಂದ್ರಯಾನ 3ರ ಯಶಸ್ಸಿಗೆ ಭಕ್ತರು ಹವನ ಪೂಜೆ ಸಲ್ಲಿಸಿದರು.

ವೇದದಿಂದ ಹಿಡಿದು ವಿಜ್ಞಾನದವರೆಗೆ ಜಗತ್ತು ನಮ್ಮ ದೇಶವನ್ನು ಒಪ್ಪಿಕೊಳ್ಳುತ್ತಿದ್ದು, ಭಾರತವು ದಕ್ಷಿಣ ಧ್ರುವದಲ್ಲಿ ತನ್ನ ಧ್ವಜವನ್ನು ಹಾರಿಸಲಿದೆ ಎಂಬ ಸಂಪೂರ್ಣ ನಂಬಿಕೆ ಇದೆ ಎಂದು ಆಧ್ಯಾತ್ಮಿಕ ನಾಯಕರಾದ ಸ್ವಾಮಿ ಚಿದಾನಂದ ಮುನಿ ಹೇಳಿದರು.
ಗಂಗೆಯ ನೀರು ದೇಶಭಕ್ತಿಯ ಪ್ರತಿಧ್ವನಿಸುವ ಹರ್ಷೋದ್ಗಾರಗಳೊಂದಿಗೆ ಅರ್ಪಣೆಗಳು ಮತ್ತು ಪ್ರಾರ್ಥನೆಗಳಿಗೆ ಸಾಕ್ಷಿಯಾಗಿದೆ. ಈ ಅವಧಿಯಲ್ಲಿ ಗಂಗಾನದಿಯ ದಡದಲ್ಲಿ ಅದ್ಭುತವಾದ ದೃಶ್ಯವನ್ನು ನೋಡಲಾಯಿತು. ಈ ಸಂದರ್ಭದಲ್ಲಿ ಎಲ್ಲರೂ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದರು. ಕ್ಷಿಪಣಿ ಮನುಷ್ಯ, ಮತ್ತು ಮಾಜಿ ರಾಷ್ಟ್ರಪತಿ ದಿವಗಂತ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನೂ ಗಂಗಾನದಿ ತಟದಲ್ಲಿ ಸ್ಮರಿಸಲಾಯಿತು.

ಭುವನೇಶ್ವರ, ವಾರಣಾಸಿ ಮತ್ತು ಪ್ರಯಾಗ್‌ರಾಜ್‌ನಲ್ಲಿ ಕೂಡ  ಚಂದ್ರಯಾನ-3 ಅನ್ನು ಯಶಸ್ವಿಗಾಗಿ ಹೋಮ, ಹವನ ಪೂಜೆ ಸಲ್ಲಿಸಲಾಯಿತು.

ಅಂತೆಯೇ, ಅಲಿಗಂಜ್‌ನ ಹನುಮಾನ್ ದೇವಸ್ಥಾನದಲ್ಲಿ ಭಕ್ತರು ಜಮಾಯಿಸಿ ಆರತಿ ಮಾಡಿದರು. ವಡೋದರದಲ್ಲಿ ಮಕ್ಕಳ ಗುಂಪು ಚಂದ್ರಯಾನ -3 ಅನ್ನು ಸುರಕ್ಷಿತವಾಗಿ ಇಳಿಸಲು ಪ್ರಾರ್ಥನೆ ಸಲ್ಲಿಸಿತು.

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ, ಉತ್ಸಾಹಭರಿತ ಭಕ್ತರು ಮಂತ್ರಗಳನ್ನು ಪಠಿಸಿದರು ಮತ್ತು ಚಂದ್ರಯಾನದ ಪೋಸ್ಟರ್‌ಗಳನ್ನು ಹಿಡಿದು ಮಿಷನ್‌ ಯಶಸ್ವಿಯಾಗಲೆಂದು ಕೋರಿದರು.

ಏತನ್ಮಧ್ಯೆ, ಚಂದ್ರಯಾನ-3 ರ ಯಶಸ್ವಿ ಲ್ಯಾಂಡಿಂಗ್ಗಾಗಿ ಮುಸ್ಲಿಂ ಬಾಂಧವರು ಲಕ್ನೋದ ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾದಲ್ಲಿ ನಮಾಜ್ ಮಾಡಿದರು.

ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ಗಾಗಿ  ಭಾರತೀಯ ಡಯಾಸ್ಪೊರಾ ಸದಸ್ಯರು ಯುಎಸ್‌ನ ವರ್ಜೀನಿಯಾದ ದೇವಸ್ಥಾನದಲ್ಲಿ ಹೋಮ-ಹವನ ಕೈಗೊಂಡರು. ಇನ್ನು ಲಂಡನ್‌ನ ಆಕ್ಸ್‌ಬ್ರಿಡ್ಜ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ವಾಂಸರು ವಿಕ್ರಮ್ ಮತ್ತು ಪ್ರಗ್ಯಾನ್‌ನ ಯಶಸ್ವಿ ಲ್ಯಾಂಡಿಂಗ್‌ಗಾಗಿ ಪ್ರಾರ್ಥಿಸಲು ಲಂಡನ್‌ನ ಆದ್ಯ ಶಕ್ತಿ ಮಾತಾಜಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!