ʻALL THE BEST ಚಂದ್ರಯಾನʼ, ಮರಳು ಶಿಲ್ಪಕಲೆ ರಚಿಸಿ ಗೌರವ ಸಲ್ಲಿಸಿದ ಸುದರ್ಶನ್‌ ಪಟ್ನಾಯಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬುಧವಾರ ಚಂದ್ರಯಾನ-3 ಲ್ಯಾಂಡಿಂಗ್ ಯಶಸ್ವಿಯಾಗಲೆಂದು ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಪ್ರಾರ್ಥಿಸಿದ್ದಾರೆ. ಒಡಿಶಾ ಕರಾವಳಿ ತೀರದಲ್ಲಿ ʻಜಯ ಹೋ ಇಸ್ರೋʼ ಎಂಬ ಮರಳು ಶಿಲ್ಪವನ್ನು ರಚಿಸಿ, ಇಸ್ರೋ ವಿಜ್ಞಾನಿಗಳಿಗೆ ಶುಭ ಹಾರೈಸಿದರು. ಚಂದ್ರಯಾನ-3 ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಬುಧವಾರ ಸಂಜೆ 6.04 ಕ್ಕೆ ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯಲು ಸಿದ್ಧವಾಗಿದೆ.

ಪಟ್ನಾಯಕ್ ಅವರ ಶಿಲ್ಪವು ಚಂದ್ರಯಾನ-3 ಭಾರತದ ಧ್ವಜದೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯುವುದನ್ನು ತೋರಿಸುತ್ತದೆ. ಚಂದ್ರಯಾನ-3 ಲ್ಯಾಂಡಿಂಗ್‌ನ ಯಶಸ್ಸಿಗಾಗಿ ದೇಶಾದ್ಯಂತ ಸರ್ವಧರ್ಮ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.

ಚಂದ್ರಯಾನ-3 ಸುರಕ್ಷಿತ ಲ್ಯಾಂಡಿಂಗ್ ಮಿಷನ್‌ ಅನ್ನು ಅಮೆರಿಕ, ರಷ್ಯಾ ಮತ್ತು ಚೀನಾ ನಂತರ ಭಾರತ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರವಾಗಲಿದೆ. ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಾಚರಣೆಗಳು ಬುಧವಾರ ಸಂಜೆ 5:20 ರಿಂದ ಇಸ್ರೋದ ವೆಬ್‌ಸೈಟ್, ಅದರ ಯೂಟ್ಯೂಬ್ ಚಾನೆಲ್, ಫೇಸ್‌ಬುಕ್ ಮತ್ತು ಸಾರ್ವಜನಿಕ ಪ್ರಸಾರಕ ಡಿಡಿ ನ್ಯಾಷನಲ್ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!