ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದ್ರಯಾನ-3 ಯಶಸ್ಸಿಗೆ ಶುಭ ಹಾರೈಸಿದ ಎಲ್ಲಾ ವಿಶ್ವ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಕೃತಜ್ಞತೆ ಸಲ್ಲಿಸಿದ್ದಾರೆ.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಅಭಿನಂದನೆಗೆ ಉತ್ತರಿಸಿದ ಪ್ರಧಾನಿ, ಈ ಮೈಲಿಗಲ್ಲು ಕೇವಲ ಭಾರತದ ಹೆಮ್ಮೆಯಲ್ಲ, ಮಾನವ ಪ್ರಯತ್ನ ಮತ್ತು ಪರಿಶ್ರಮದ ದಾರಿದೀಪವಾಗಿದೆ. ವಿಜ್ಞಾನ ಮತ್ತು ಬಾಹ್ಯಾಕಾಶದಲ್ಲಿ ನಮ್ಮ ಪ್ರಯತ್ನಗಳು ಎಲ್ಲರಿಗೂ ಉಜ್ವಲವಾದ ನಾಳೆಗೆ ದಾರಿ ಮಾಡಿಕೊಡಲಿ ಎಂದು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
EU ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಅವರ ಶುಭಾಶಯಗಳಿಗೆ ಪ್ರತಿಕ್ರಿಯೆಯಾಗಿ, “ಅಭಿನಂದನೆಯ ಮಾತುಗಳಿಗಾಗಿ @vonderleyen ಧನ್ಯವಾದಗಳು. ಭಾರತವು ಎಲ್ಲಾ ಮಾನವಕುಲದ ಸುಧಾರಣೆಗಾಗಿ ಅನ್ವೇಷಿಸಲು, ಕಲಿಯಲು ಮತ್ತು ಹಂಚಿಕೊಳ್ಳಲು ಸದಾ ಮುಂದೆ ಇದೆ ಎಂದರು.
ಮಡಗಾಸ್ಕರ್ ಅಧ್ಯಕ್ಷರ ಮಾತುಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಿ, “ನಿಮ್ಮ ಅದ್ಭುತ ಮಾತುಗಳಿಗೆ ಕೃತಜ್ಞತೆಗಳು. ಬಾಹ್ಯಾಕಾಶದಲ್ಲಿ ಭಾರತದ ದಾಪುಗಾಲುಗಳು ಮುಂಬರುವ ದಿನಗಳಲ್ಲಿ ಮಾನವೀಯತೆಗೆ ನಿಜವಾಗಿಯೂ ಪ್ರಯೋಜನವನ್ನು ನೀಡುತ್ತವೆ.
ಪ್ರಜ್ಞಾನ್ ರೋವರ್ ಅನ್ನು ತನ್ನ ಹೊಟ್ಟೆಯಲ್ಲಿ ಹೊತ್ತ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುತ್ತಿದ್ದಂತೆ, ಇದು ಭಾರತದ ಬಾಹ್ಯಾಕಾಶ ಪ್ರಯಾಣದಲ್ಲಿ ದೈತ್ಯ ಜಿಗಿತವನ್ನು ಗುರುತಿಸಿತು. ಇದು ಇಸ್ರೋದ ಸುದೀರ್ಘ ವರ್ಷಗಳ ಶ್ರಮಕ್ಕೆ ಅರ್ಹವಾದ ಅಂತಿಮ ಫಲಿತಾಂಶ ಎಂದು ವಿವರಿಸಿದರು.
ಭೂತಾನ್‌ನ ಪ್ರಧಾನಿ ಲೋಟೆ ತ್ಶೆರಿಂಗ್ ಅಭಿನಂದನೆಗೆ ಪ್ರಧಾನಿ ಧನ್ಯವಾದ ತಿಳಿಸಿದರು. “ಚಂದ್ರಯಾನ-3ರ ಬಗ್ಗೆ ಮೆಚ್ಚುಗೆಯ ಮಾತುಗಳಿಗಾಗಿ @PMBhutan Lotay Tshering ಅವರಿಗೆ ಧನ್ಯವಾದಗಳು. ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಯಾವಾಗಲೂ ಜಾಗತಿಕ ಯೋಗಕ್ಷೇಮವನ್ನು ಹೆಚ್ಚಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ ಎಂದರು.