ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಯೊಬ್ಬ ಭಾರತೀಯನ ಕನಸಾದ ಚಂದ್ರಯಾನ-3 ಸಫಲವಾಗಿದೆ. ನೂರಾರು ವಿಜ್ಞಾನಿಗಳು, ತಂತ್ರಜ್ಞೆಯ ಹಾಗೂ ಉದ್ಯಮಿಗಳ ವರ್ಷಗಳಿಂದ ಕಟ್ಟ ಶ್ರಮಕ್ಕೆ ಬೆಲೆ ಸಿಕ್ಕಿದೆ.
ಚಂದ್ರಯಾನ-3ರ ಲ್ಯಾಂಡರ್ ಹಾಗೂ ರೋವರ್ನ ಪ್ರಮುಖ ಭಾಗವಾದ 5-ವ್ಯಾಟ್ ಸಿಗ್ನಲ್ ಆಂಪ್ಲಿಫೈಯರ್ನ್ನು ಅಭಿವೃದ್ಧಿಪಡಿಸಿದ ಹೆಮ್ಮೆ ನಮ್ಮ ಕನ್ನಡಿಗರಾದ ಡಾ. ಬಿಎಚ್ಎಂ ದಾರುಕೇಶ್ ಅವರದ್ದು.
ಬೇರೆ ಯಾವ ದೇಶಗಳೂ ಆಂಪ್ಲಿಫೈಯರ್ನ್ನು ಒದಗಿಸಲು ಮುಂದೆ ಬಾರದೇ ಇದ್ದಾಗ ಇಸ್ರೋ ಪ್ರಧಾನ ಕಚೇರಿಯ ಸಹಾಯಕ ನಿರ್ದೇಶಕ ದಾರುಕೇಶ್ ಹಾಗೂ ಅವರ ತಂಡ ಆಂಪ್ಲಿಫೈಯರ್ನ್ನು ಅಭಿವೃದ್ಧಿಪಡಿಸಿದೆ.
ವಿಜಯನಗರದ ಕೊಟ್ಟೂರಿನವರಾದ ದಾರುಕೇಶ್ ಹಾಗೂ ತಂಡ ಈ ಸಾಧನೆಯನ್ನು ಮಾಡಿದೆ. ಆಂಪ್ಲಿಫೈಯರ್ನ್ನು ಹೆಚ್ಚಾಗಿ ರಕ್ಷಣಾ ಕಾರ್ಯಾಚರಣೆಗಳಿಗಾಗಿ ಸೈನ್ಯದಲ್ಲಿ ಬಳಸಲಾಗುತ್ತದೆ.
ಆಂಪ್ಲಿಫೈಯರ್ ಕೆಲಸ ಏನು?
ಲ್ಯಾಂಡರ್ ಮತ್ತು ರೋವರ್ನಿಂದ ಸಂದೇಶವನ್ನು ಭೂಮಿಯಿಂದ ನಾಲ್ಕು ಲಕ್ಷ ಕಿ.ಮೀ ದೂರದಲ್ಲಿರುವ ಚಂದ್ರನ ಮೇಲ್ಮೈನಲ್ಲಿ ಸುತ್ತುತ್ತಿರುವ ಉಪಗ್ರಹಕ್ಕೆ ತಲುಪಿಸುವುದು ಆಂಪ್ಲಿಫೈಯರ್ ಕೆಲಸವಾಗಿದೆ. ಭೂಮಿಯಿಂದ ಉಡಾವಣೆಯಾಗುವ ಉಪಗ್ರಹ ಅಥವಾ ಬಾಹ್ಯಾಕಾಶ ನೌಕೆಯ ಕಾರ್ಯಾಚರಣೆಯ ಸ್ಥಿತಿಯನ್ನು ತಿಳಿಸುವುದು ಆಂಪ್ಲಿಫೈಯರ್.