ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೈಗರ್ ಚಿತ್ರದ ಫ್ಲಾಪ್ ನಂತರ ವಿಜಯ್ ದೇವರಕೊಂಡ ಸ್ವಲ್ಪ ಗ್ಯಾಪ್ ತೆಗೆದುಕೊಂಡು ಈಗ ಖುಷಿಯೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ವಿಜಯ್ ಮತ್ತು ಸಮಂತಾ ಅಭಿನಯದ ಶಿವ ನಿರ್ವಾಣ ನಿರ್ದೇಶನದ ಲವ್ ರೊಮ್ಯಾಂಟಿಕ್ ಎಂಟರ್‌ಟೈನರ್ ಖುಷಿ, ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ. ಸದ್ಯ ಚಿತ್ರಘಟಕದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಸಿನಿಮಾ ಪ್ರಚಾರದ ವೇಳೆ ರಶ್ಮಿಕಾ ಜೊತೆ ಮತ್ತೆ ನಿಮ್ಮ ಸಿನಿಮಾ ಯಾವಾಗ ಎಂದು ಕೇಳಿದ ಪ್ರಶ್ನೆಗೆ ವಿಜಯ್ ದೇವರಕೊಂಡ ಉತ್ತರಿಸಿದರು. ಖಂಡಿತಾ ರಶ್ಮಿಕಾ ಜೊತೆ ಇನ್ನೊಂದು ಸಿನಿಮಾ ಮಾಡುತ್ತೇನೆ. ಕಥೆಗಳನ್ನು ಕೇಳುತ್ತಿದ್ದೇನೆ, ನಾನು ಓಕೆ ಮಾಡುವ ಕಥೆಗಳಲ್ಲಿ ರಶ್ಮಿಕಾ ಸೆಟ್ಟಾಗುತ್ತಾಳೆ ಅಂದುಕೊಂಡರೆ ಖಂಡಿತ ಅವರ ಜೊತೆ ಸಿನಿಮಾ ಮಾಡುತ್ತೇನೆ. ಒಳ್ಳೆಯ ಸ್ಕ್ರಿಪ್ಟ್‌ಗಾಗಿ ಹುಡುಕುತ್ತಿದ್ದೇವೆ. ರಶ್ಮಿಕಾ ಜೊತೆ ಮತ್ತೊಂದು ಸಿನಿಮಾ ಬರಲಿದೆ ಎಂದು ಹೇಳಿದ್ದಾರೆ. ಎರಡೆರಡು ಬಾರಿ ಪ್ರೇಮ ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವ ವಿಜಯ್ – ರಶ್ಮಿಕಾ ಈ ಬಾರಿ ಯಾವ ಸಿನಿಮಾದೊಂದಿಗೆ ಬರುತ್ತಾರೋ ನೋಡೋಣ.
ಈಗಾಗಲೇ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಗೀತ ಗೋವಿಂದಂ, ಡಿಯರ್ ಕಾಮ್ರೇಡ್ ಚಿತ್ರಗಳು ದೊಡ್ಡ ಹಿಟ್ ಆಗಿವೆ.