ಹೊಸದಿಗಂತ ಡಿಜಿಟಲ್ ಡೆಸ್ಕ್:
ರಕ್ಕಸ ಗಾಳಿ, ಕರ್ಕಶ ಶಬ್ದ, ಗುಡುಗು ಸಿಡಿಲಿನ ಆರ್ಭಟ..ಸೌದಿ ಅರೇಬಿಯಾದಲ್ಲಿ ಭಯಂಕರ ವಾತಾವರಣ ತಲ್ಲಣ ಮೂಡಿಸಿದೆ. ಭಾರೀ ಗಾಳಿ, ಮಳೆಯಿಂದ ಪ್ರಮುಖ ನಗರಗಳು ತತ್ತರಿಸಿವೆ.
ಬಿರುಗಾಳಿಗೆ ರಸ್ತೆಯಲ್ಲಿದ್ದ ಭಾರಿ ಹೋರ್ಡಿಂಗ್ಗಳು, ಟವರ್ಗಳು ಹಾರಿಹೋಗಿದ್ದು, ಆಸ್ತಿಪಾಸ್ತಿಗೆ ಗಂಭೀರ ಹಾನಿಯಾಗಿದೆ. ಪ್ರಖ್ಯಾತ ನಗರಗಳಾದ ಜೆಡ್ಡಾ ಮತ್ತು ಮಕ್ಕಾದಲ್ಲಿ ಭೀಕರ ಗಾಳಿ ಬೀಸಿತು. ಈ ಗಾಳಿಗೆ ಸೋಫಾ, ಕುರ್ಚಿ ಮತ್ತಿತರ ವಸ್ತುಗಳು ದಿಕ್ಕಾಪಾಲಾಗಿವೆ.
ಭೀಕರ ಗಾಳಿಯಿಂದ ಉಂಟಾದ ವಿನಾಶದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ವೀಡಿಯೋಗಳನ್ನು ನೋಡಿದ ನೆಟ್ಟುಗರು ಭಯಭೀತರಾದರು. ವೀಡಿಯೋ ನೋಡಿದವರಿಗೆ ಇಷ್ಟು ಗಾಬರಿ ಆಗಿದ್ದರೆ ಪ್ರತ್ಯಕ್ಷವಾಗಿ ಎದುರಿಸಿದವರ ಪರಿಸ್ಥಿತಿ ಹೇಗಿದೆ ಎಂಬುದನ್ನು ಊಹಿಸಲೂ ಅಸಾಧ್ಯ.
VIDEO: Heavy rain storm in Saudi Arabia brings down a huge billboard missing a car by few foot. pic.twitter.com/sBKT6w5vcS
— Insider Corner (@insidercnews) August 22, 2023
An unusual storm in Mecca, Saudi Arabia 👀 pic.twitter.com/XRxPNzB7JR
— HumanDilemma (@HumanDilemma_) August 22, 2023
Massive rain storm in Mecca of Saudi Arabia pic.twitter.com/SGPZap8QcW
— Insider Corner (@insidercnews) August 22, 2023