ಚಂದ್ರಯಾನ-3 ಯಶಸ್ವಿಗೆ ಶ್ರೀಮದುತ್ತರಾಧಿಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಗಳು ಸಂತಸ

ಹೊಸದಿಗಂತ ವರದಿ ಬಳ್ಳಾರಿ:

ಚಂದ್ರಯಾನ-3 ಯಶಸ್ವಿಗೆ ಶ್ರೀಮದುತ್ತರಾಧಿಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಭಾರತೀಯರಾದ ನಮ್ಮೆಲ್ಲರಿಗೂ ಸಂತಸದ ದಿನ, ಎಲ್ಲರೂ ಅತ್ಯಂತ ಅಭಿಮಾನದಿಂದ ಇದನ್ನು ಸಂತೋಷದಿಂದ ಆನಂದವನ್ನು ಹಂಚಿಕೊಳ್ಳುವ ಸಂಗತಿ.

‘ಚಂದ್ರಯಾನ’ ಇವತ್ತಿನ ಈ ಕ್ಷಣದಲ್ಲಿ ಲ್ಯಾಂಡ್ ಆಗಿ ನಮ್ಮ ಇಡೀ ಭಾರತ ದೇಶಕ್ಕೆ ದೊಡ್ಡದಾದ ವಿಷಯವನ್ನು ತಂದುಕೊಟ್ಟಿದೆ. ನಮ್ಮ ಭಾರತೀಯ ವಿಜ್ಞಾನಿಗಳೆಲ್ಲ ಹಗಲಿರುಳು ಪರಿಶ್ರಮವನ್ನು ಪಟ್ಟು ತಮ್ಮ ಎಲ್ಲ ಬುದ್ದಿ ಶಕ್ತಿಯನ್ನು ಉಪಯೋಗಿಸಿ, ನಿರಂತರ ಪರಿಶ್ರಮದಿಂದ ದೇವರ ವಿಶೇಷವಾದ ಅನುಗ್ರಹದಿಂದ ಈ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟದ್ದು, ದೇಶದ 140ಕೋಟಿ ಭಾರತೀಯರೆಲ್ಲರ ವಿಶೇಷವಾದಂತದ ಪ್ರಶಂಸೆಗೆ ಎಲ್ಲ ವಿಜ್ಞಾನಿಗಳು ಪಾತ್ರರಾಗಿದ್ದಾರೆ. ಅವರೆಲ್ಲರಿಗೂ ದೇವರು ವಿಶೇಷ ಅನುಗ್ರಹವನ್ನು ಕರುಣಿಸಲಿ, ಇನ್ನೂ ಹೆಚ್ಚಿನ ಸಾಧನೆಯನ್ನು ಖಗೋಲದಲ್ಲಿ ಮಾಡುವಂತಾಗಲಿಎಂದು ತಿಳಿಸಿದ್ದಾರೆ.

ಖಗೋಲದ ವಿಶೇಷ ಸಂಶೋಧನೆಗಳನ್ನು ಮಾಡಿ, ಜಗತ್ತಿನ ಮುಂದೆ ಇಡ್ತಾರೆ ನಮ್ಮೆಲ್ಲರಿಗೂ ಅಷ್ಟು ಸಂತೋಷವಾಗಲಿದೆ. ಇಂತಹ ಅದ್ಭುತವಾದ ಖಗೋಲ, ಭೂಗೋಲಗಳನ್ನು ಸೃಷ್ಟಿ ಮಾಡಿದಂತಹ ಭಗವಂತನ ಮಹಿಮೆ ಇಡೀ‌ ಜಗತ್ತಿಗೆ ತಿಳಿಯಲಿದೆ. ದೇವರು ಮಾಡಿದ ಈ ಅದ್ಭುತವಾದ ಸೃಷ್ಟಿಯಲ್ಲಿ ಮಾನವರು ತಮ್ಮ ಎಲ್ಲ ಬುದ್ಧಿ ಶಕ್ತಿ ಪ್ರಯತ್ನ ಮಾಡಿ, ದೇವರ ವಿಶೇಷವಾದ ಅನುಗ್ರಹಗಳಿಂದ ಇಂತಹ ಸಂಶೋಧನೆಗಳನ್ನು ಮಾಡಿದಾಗ ಇಡೀ ಜಗತ್ತಿಗೆ ದೊಡ್ಡ ಲಾಭವಾಗಲಿದೆ. ಇಂತಹ ಒಂದು ಜಾಗತಿಕವಾದ ದೊಡ್ಡ ಕೊಡುಗೆಯನ್ನು ನಮ್ಮ‌ಭಾರತೀಯ ವಿಜ್ಞಾನಿಗಳು ಕೊಟ್ಟಿದ್ದು, ಅವರೆಲ್ಲರಿಗೂ ಕೋಟಿ ಕೋಟಿ ಅಭಿನಂದನೆಗಳನ್ನು ಸಲ್ಲಿಸುವೆ.

ನಮ್ಮ ವಿಜ್ಞಾನಿಗಳಿಗೆ ದೇವರು ಇನ್ನೂ ಹೆಚ್ಚಿನ ಶಕ್ತಿಯನ್ನು ಕರುಣಿಸಲಿ, ನಮ್ಮ‌ಭಾರತದ ಘನ ಸರ್ಕಾರಕ್ಕೆ ಇನ್ನಷ್ಟು ವಿಶೇಷವಾದ ಶಕ್ತಿಯನ್ನು ಕೊಟ್ಟು, ಈ ತರಹದ ವಿಜ್ಞಾನಿಗಳಿಗೆ ಇನ್ನೂ ಹೆಚ್ಚು ಪ್ರೊತ್ಸಾಹ ನೀಡಿ, ಇಂತಹ ಕಾರ್ಯವನ್ನು ಮಾಡಿಸಲಿ, ಇದೇ ರೀತಿಯ ಸಾಧನೆ ಇನ್ನೂ ವಿಶೇಷವಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!