ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಬೈಕ್ಶೋರೂಂನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ೩೦೦ಕ್ಕೂ ಹೆಚ್ಚು ಹೊಸ ಬೈಕ್ಗಳು ಬೆಂಕಿಗಾಹುತಿಯಾಗಿವೆ.
ಚೆನ್ನೈ-ಕೊಲ್ಕತ್ತಾ ಹೆದ್ದಾರಿಯ ಕೆಪಿ ನಗರದ ಟಿವಿಎಸ್ ಶೋರೂಂ ಹಾಗೂ ಗೋಡೌನ್ನಲ್ಲಿ ಶಾರ್ಟ್ ಸರ್ಕೀಟ್ನಿಂದ ಬೆಂಕಿ ಹತ್ತಿದ ಎನ್ನಲಾಗಿದೆ. ಶೋರೂಂನ ಮೊದಲ ಮಹಡಿಯಿಂದ ಬೆಂಕಿ ಆರಂಭವಾಗಿ ಪಕ್ಕದಲ್ಲೇ ಇದ್ದ ಗೋಡೌನ್ಗೆ ಬೆಂಕಿ ಹತ್ತಿದೆ. ತಕ್ಷಣವೇ ನೋಡಿದವರು ಅಗ್ನಿಶಾಮಕ ದಳಕ್ಕೆ ಕರೆಮಾಡಿದ್ದಾರೆ.
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಚಾರ್ಜ್ ಮಾಡುವಾಗ ಶಾರ್ಟ್ ಸರ್ಕೀಟ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.