ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಿನೆಲ್ಲೆಡೆ ಇಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಬೇಡಿದ ವರವ ನೀಡುವ ಮಹಾಲಕ್ಷ್ಮಿಗೆ ಇಂದು ಭಕ್ತರಿಂದ ವಿಶೇಷ ಪೂಜೆಗಳು ನೇರವೇರುತ್ತಿದೆ. ಈ ಶುಭ ದಿನದಂದು ನೀವು ನಿಮ್ಮ ಸ್ನೇಹಿತರು, ಬಂಧು-ಬಳಗದವರಿಗೆ ಶುಭಾಶಯಗಳನ್ನು ತಿಳಿಸಲು ಸಂದೇಶಗಳನ್ನು ಇಲ್ಲಿ ನೀಡಲಾಗಿದೆ.
ವರಮಹಾಲಕ್ಷ್ಮಿ ಹಬ್ಬದ ಸಂದೇಶಗಳು
ಈ ವರ ಮಹಾಲಕ್ಷ್ಮಿ ಹಬ್ಬ ನಿಮ್ಮ ಸಡಗರ, ಸಂಭ್ರಮ ಹೆಚ್ಚಿಸಲಿ, ಲಕ್ಷ್ಮಿಯ ಕೃಪೆ ನಿಮ್ಮ ಕುಟುಂಬದ ಮೇಲಿರಲಿ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
ಲಕ್ಷ್ಮಿ ದೇವಿಯ ಕೃಪೆಯಿಂದ ನಿಮ್ಮ ಮನೆಯಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚಾಗಲಿ, ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ದೊರೆಯಲಿ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
ದೇವಿಯು ನಿಮಗೆ ಸಿರಿ, ಭೂಮಿ, ಪ್ರೀತಿ, ಕೀರ್ತಿ, ಶಾಂತಿ, ತುಷ್ಠಿ,ಪುಷ್ಠಿ ನೀಡಿ ಅನುಗ್ರಹಿಸಲಿ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
ವರಮಹಾಲಕ್ಷ್ಮಿ ದೇವಿಯ ಅನುಗ್ರಹವಿರಲಿ, ನಿಮ್ಮೆಲ್ಲಾ ಆಸೆ ನೆರವೇರಲಿ.
ಮಹಾಲಕ್ಷ್ಮಿಯು ಎಲ್ಲರಿಗೂ ಐಶ್ವರ್ಯ, ಆರೋಗ್ಯ, ಸಂಪತ್ತು, ಸಮೃದ್ಧಿಯನ್ನು ನೀಡಿ ಕರುಣಿಸಲಿ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.