ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಇಂದು ಅಥೆನ್ಸ್ಗೆ ಭೇಟಿ ನೀಡಲಿದ್ದು, ಭರ್ಜರಿ ಸ್ವಾಗತಕ್ಕೆ ಗ್ರೀಸ್ ತಯಾರಾಗಿದೆ.
ಇದಕ್ಕೆ ವಿಶೇಷ ಕಾರಣವೂ ಇದೆ, 40 ವರ್ಷಗಳ ಪ್ರಧಾನಿ ಭಾರತೀಯ ಪ್ರಧಾನಿ ಮೊದಲ ಬಾರಿಗೆ ಗ್ರೀಸ್ಗೆ ಭೇಟಿ ನೀಡಲಿದ್ದಾರೆ. ಅಥೆನ್ಸ್ನಲ್ಲಿ ಪ್ರಧಾನಿ ಮೋದಿ ಸ್ವಾಗತಕ್ಕಾಗಿ ಜನರು ಕಾದು ಕುಳಿತಿದ್ದಾರೆ.
40 ವರ್ಷಗಳ ನಂತರ ಗ್ರೀಸ್ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಮ್ಮೆಯಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಗ್ರೀಸ್ ಪ್ರಧಾನಿ ಮಿತ್ಸೋಟಾಕಿಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಎರಡು ದೇಶಗಳ ನಡುವಣ ಸಂಬಂಧಗಳನ್ನು ಗಟ್ಟಿಗೊಳಿಸುವ ಹಾಗೂ ವ್ಯಾಪಾರ ವಹಿವಾಟುಗಳ ಬಗ್ಗೆ ಮಾತನಾಡಲಾಗುತ್ತದೆ. ಗ್ರೀಸ್ನಲ್ಲಿರುವ ಭಾರತೀಯ ಸಮುದಾಯದ ಜತೆಗೂ ಪ್ರಧಾನಿ ಸಂವಾದ ನಡೆಸಲಿದ್ದಾರೆ.
#WATCH | Members of the Indian diaspora gather outside the hotel in Athens where PM Modi will stay during his one-day official visit to Greece today pic.twitter.com/SDOERTwlj5
— ANI (@ANI) August 25, 2023