ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್ ಶೃಂಗಸಭೆ ಮುಗಿಸಿ ಗ್ರೀಸ್‌ಗೆ ಆಗಮಿಸಿದ್ದಾರೆ. ಗ್ರೀಸ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಗ್ರೀಸ್‌ನಲ್ಲಿರುವ ಭಾರತೀಯರಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ.
ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಗ್ರೀಸ್‌ಗೆ ಆಗಮಿಸಿದ್ದಾರೆ. 40 ವರ್ಷಗಳ ನಂತರ ಭಾರತದ ಪ್ರಧಾನಿ ಗ್ರೀಸ್‌ಗೆ ಭೇಟಿ ನೀಡಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ ಗ್ರೀಸ್‌ಗೆ ಭೇಟಿ ನೀಡಿದ್ದರು.
ಗ್ರೀಸ್ ವಿಮಾನ ನಿಲ್ದಾಣಕ್ಕೆ ಬಂದ ಪ್ರಧಾನಿ ಮೋದಿ ಅವರನ್ನು ಗ್ರೀಕ್ ವಿದೇಶಾಂಗ ಸಚಿವ ಜಾರ್ಜ್ ಗೆರಾಪೆಟ್ರಿಸ್ ಸ್ವಾಗತಿಸಿದ್ದಾರೆ. ಪ್ರಧಾನಿ ಭೇಟಿಗೆ ನೂರಾರು ಭಾರತೀಯರು ಆಗಮಿಸಿದ್ದು, ಅಧ್ಧೂರಿ ಸ್ವಾಗತ ನೀಡಿದ್ದಾರೆ.
Landed in Athens. Looking forward to a productive Greece visit aimed at deepening India-Greece friendship. I will be holding talks with @PrimeministerGR Kyriakos Mitsotakis and also interacting with the Indian community. pic.twitter.com/CaHaYoa5yb
— Narendra Modi (@narendramodi) August 25, 2023