ಮೈದಾ ಹಿಟ್ಟು, ಕೋಕೋ ಪೌಡರ್, ಸಕ್ಕರೆ, ಬೇಕಿಂಗ್ ಪೌಡರ್, ಚಿಟಿಕೆ ಉಪ್ಪು,ಹಾಲು, ಮೊಟ್ಟೆ, ಕರಗಿಸಿದ ಬೆಣ್ಣೆ, ವೆನಿಲಾ ಎಸೆನ್ಸ್, ಚಾಕೋಲೇಟ್ ಚಿಪ್ಸ್.
ತಯಾರಿಸುವ ವಿಧಾನ:
ಒಂದು ಬಟ್ಟಲಿನಲ್ಲಿ ಹಿಟ್ಟು, ಕೋಕೋ ಪೌಡರ್, ಸಕ್ಕರೆ, ಬೇಕಿಂಗ್ ಪೌಡರ್ ಮತ್ತು ಉಪ್ಪನ್ನು ಒಟ್ಟಿಗೆ ಮಿಶ್ರಣ ಮಾಡಿ.
ಇನ್ನೊಂದು ಬಟ್ಟಲಿನಲ್ಲಿ ಹಾಲು, ಮೊಟ್ಟೆ ಮತ್ತು ವೆನಿಲಾವನ್ನು ಚೆನ್ನಾಗಿ ಸೇರಿಸಿ.
ಒಣ ಮಿಶ್ರಣಕ್ಕೆ ಆರ್ದ್ರ ಮಿಶ್ರಣವನ್ನು ಸುರಿಯಿರಿ ಮತ್ತು ಎಲ್ಲವೂ ಸೇರಿಕೊಳ್ಳುವವರೆಗೆ ನಿಧಾನವಾಗಿ ಬೆರೆಸಿ
ಚಾಕೋಲೇಟ್ ಚಿಪ್ಸ್‌ಗಳನ್ನು ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ.
ಮಧ್ಯಮ ಉರಿಯಲ್ಲಿ ನಾನ್‌ಸ್ಟಿಕ್ ಪ್ಯಾನ್ ಅಥವಾ ಗ್ರಿಡಲ್ ಅನ್ನು ಬಿಸಿ ಮಾಡಿ, ಸ್ವಲ್ಪ ಬೆಣ್ಣೆ ಅಥವಾ ಎಣ್ಣೆ ಹಾಕಿ.
ಪ್ರತಿ ಪ್ಯಾನ್‌ಕೇಕ್‌ಗೆ 1/4 ಕಪ್ ಬ್ಯಾಟರ್ ಸುರಿಯಿರಿ. ಮೇಲ್ಮೈಯಲ್ಲಿ ಗುಳ್ಳೆಗಳು ಕಾಣಿಸಿಕೊಂಡಾಗ, ಸುಮಾರು 2-3 ನಿಮಿಷಗಳ ನಂತರ ತಿರುಗಿಸಿ. ಇನ್ನೊಂದು ಬದಿಯನ್ನು ಚಿನ್ನದ ಬಣ್ಣ ಬರುವವರೆಗೆ ಬೇಯಿಸಿ ಮೇಲೆ ಬೇಕಾದ ಟಾಪಿಂಗ್ಸ್ ಹಾಕಿ ಬಿಸಿ ಬಿಸಿ ತಿನ್ನಿ

