ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ರಾಜಧಾನಿ ಹೈದರಾಬಾದ್ನಲ್ಲಿ ನಿರ್ಮಿಸಲಾಗಿರುವ ನೂತನ ಸೆಕ್ರೆಟರಿಯೇಟ್ ಆವರಣದಲ್ಲಿ ಶುಕ್ರವಾರ ಮಂದಿರ, ಮಸೀದಿ ಹಾಗೂ ಚರ್ಚ್ ಅನ್ನು ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಏಕಕಾಲಕ್ಕೆ ಉದ್ಘಾಟಿಸಿದರು.
ರಾಜ್ಯಾಡಳಿತ ಕೇಂದ್ರವಾದ ಡಾ.ಬಿ.ಆರ್.ಅಂಬೇಡ್ಕರ್ ಸೆಕ್ರೆಟರಿಯೇಟ್ ಅನ್ನು ಏಪ್ರಿಲ್ 30ರಂದು ಕೆಸಿಆರ್ ಉದ್ಘಾಟಿಸಿದ್ದು, ಸೆಕ್ರೆಟರಿಯೇಟ್ ಆವರಣದ ನೈಋತ್ಯ ದಿಕ್ಕಿನಲ್ಲಿ ನಲ್ಲಪೋಚಮ್ಮ ಅಮ್ಮಾವರಿ ದೇಗುಲದ ಜೊತೆಗೆ ಶಿವ ಮತ್ತು ಆಂಜನೇಯ ಸ್ವಾಮಿ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅಲ್ಲದೇ, ಒಂದು ಮಸೀದಿ ಹಾಗೂ ಚರ್ಚ್ ನಿರ್ಮಾಣ ಮಾಡಲಾಗಿದೆ. ಮೂರು ಧರ್ಮಗಳ ಪೂಜಾ ಸ್ಥಳಗಳ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್, ಸಿಎಂ ಕೆಸಿಆರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಸೇರಿದಂತೆ ಹಲವು ಸಚಿವರು ಪಾಲ್ಗೊಂಡಿದ್ದರು.
డా. బి. ఆర్. అంబేద్కర్ తెలంగాణ రాష్ట్ర సచివాలయ ప్రాంగణంలో నిర్మించిన నూతన దేవాలయాన్ని ఈరోజు గవర్నర్ శ్రీమతి తమిళిసై సౌందరరాజన్ తో కలిసి ముఖ్యమంత్రి శ్రీ కె. చంద్రశేఖర్ రావు ప్రారంభించారు.
ఈ కార్యక్రమంలో మంత్రులు, ఎంపీలు, ఎమ్మెల్సీలు, ఎమ్మెల్యేలు, ప్రభుత్వ ప్రధాన కార్యదర్శి… pic.twitter.com/XCsmdy6FML
— Telangana CMO (@TelanganaCMO) August 25, 2023
ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಮಹಾಪೂರ್ಣಾಹುತಿ ಹಾಗೂ ಮಹಾ ಮಂಗಳಾರತಿಯಲ್ಲಿ ರಾಜ್ಯಪಾಲೆ, ಸಿಎಂ ಭಾಗವಹಿಸಿ ಪೂಜೆ ಸಲ್ಲಿಸಿದರು. ನಂತರ ಪಕ್ಕದಲ್ಲಿರುವ ಚರ್ಚ್ಗೆ ತೆರಳಿದ ತಮಿಳಿಸೈ ಮತ್ತು ಕೆಸಿಆರ್ ಕೇಕ್ ಕತ್ತರಿಸುವ ಮೂಲಕ ಚರ್ಚ್ ಉದ್ಘಾಟಿಸಿದರು. ಬಳಿಕ ಮಸೀದಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು.
ಎಐಎಂಐಎಂ ಅಧ್ಯಕ್ಷ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ವಿಧಾನಸಭೆಯಲ್ಲಿ ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿ ಉಪಸ್ಥಿತರಿದ್ದರು.
Hon'ble CM Sri K. Chandrashekar Rao along with Hon'ble Governor @DrTamilisaiGuv inaugurated the newly constructed Church in the premises of Dr. B.R. Ambedkar Telangana State Secretariat today.
Ministers, MPs, MLCs, MLAs, @TelanganaCS Smt. Santhi Kumari, Secretariat employees and… pic.twitter.com/DtBIPJCkNo
— Telangana CMO (@TelanganaCMO) August 25, 2023