ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬ್ಯಾಂಕ್ ಖಾತೆಯಲ್ಲಿ 17 ರೂಪಾಯಿ ಇಟ್ಟುಕೊಂಡು, ದೇವಸ್ಥಾನದ ಹುಂಡಿಗೆ 100 ಕೋಟಿ ರೂಪಾಯಿ ಚೆಕ್ ಬರೆದು ಹಾಕಿದ್ದಾನೆ.
ಆಂಧ್ರ ಪ್ರದೇಶದ ಸೀಮಾಚಲಂನ ಶ್ರೀ ವರಮಹಾಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲದ ಹುಂಡಿಯಲ್ಲಿ ಈ ಚೆಕ್ ದೊರೆತಿದೆ. ಹುಂಡಿಯಲ್ಲಿ ದೊರೆತ ಈ ಚೆಕ್ ಅನ್ನು ದೇವಸ್ಥಾನದ ಮಂಡಳಿಯುವರು ಬ್ಯಾಂಕ್‌ಗೆ ನಗದಿಗೆ ಕಳುಹಿಸಿದಾಗ ಈ ಸತ್ಯ ಬಯಲಾಗಿದೆ.
ಬೋಡ್ಡೆಪಳ್ಳಿ ರಾಧಾಕೃಷ್ಣ ಎಂಬವವರು ಸಹಿ ಮಾಡಿರುವ ಈ ಚೆಕ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್‌ಗೆ ಸೇರಿದ ಚೆಕ್‌ನಲ್ಲಿ ಭಕ್ತ ದಿನಾಂಕವನ್ನು ಬರೆದಿಲ್ಲ. ವಿಶಾಖಪಟ್ಟಣಂನಲ್ಲಿರುವ ಬ್ಯಾಂಕ್ ಶಾಖೆಯಲ್ಲಿ ಭಕ್ತ ಖಾತೆದಾರನಾಗಿದ್ದಾನೆ.
ಹುಂಡಿಯಲ್ಲಿ ಚೆಕ್ ಇರುವುದನ್ನು ಕಂಡ ಅಧಿಕಾರಿಗಳು, ಅದನ್ನು ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಗೆ ನೀಡಿದ್ದಾರೆ. ಆದರೆ, 100 ಕೋಟಿ ರೂ. ಚೆಕ್ ಕಂಡ ಅಧಿಕಾರಿಗೆ ಅನುಮಾನ ಶುರುವಾಗಿದೆ. ನಿಜವಾಗಲೂ ನೂರು ಕೋಟಿ ರೂ. ಚೆಕ್ ನೀಡಲು ಸಾಧ್ಯವೆ ಎಂಬ ಪ್ರಶ್ನೆ ಮೂಡಿದೆ. ಅವರು ಕೂಡಲೇ ಚೆಕ್ ಅಸಲಿಯನ್ನು ಪರೀಕ್ಷಿಸಲು ಹತ್ತಿರದ ಬ್ಯಾಂಕ್ ಶಾಖೆ ಹೋಗಿದ್ದು, ಆಗ, ಚೆಕ್ ಬರೆದ ವ್ಯಕ್ತಿಯ ಖಾತೆಯಲ್ಲಿ ಕೇವಲ 17 ರೂ. ಇರುವುದು ಪತ್ತೆಯಾಗಿದೆ.