ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುರುವಾರ ಮಧ್ಯರಾತ್ರಿ ಅಮೆರಿಕದ ನೌಕಾಪಡೆಯ ಫೈಟರ್ ಜೆಟ್ ಪತನವಾಗಿರುವ ಘಟನೆ ಸ್ಯಾನ್ ಡಿಯಾಗೋದಲ್ಲಿ ನಡೆದಿದೆ. ಅಪಘಾತದಲ್ಲಿ ಯುಎಸ್ ಮೆರೈನ್ ಕಾರ್ಪ್ಸ್ ಎಫ್/ಎ-18 ಹಾರ್ನೆಟ್ ಫೈಟರ್ ಜೆಟ್ ಪೈಲಟ್ ಸಾವನ್ನಪ್ಪಿದ್ದಾರೆ.
ಈ ಕುರಿತು 2ನೇ ಮೆರೈನ್ ಏರ್‌ಕ್ರಾಫ್ಟ್ ವಿಂಗ್, ಮೆರೈನ್ ಕಾರ್ಪ್ಸ್ ಏರ್ ಸ್ಟೇಷನ್ ಶುಕ್ರವಾರ ಹೇಳಿಕೆಯಲ್ಲಿ ದೃಢಪಡಿಸಿದೆ. ಈ ಫೈಟರ್ ಜೆಟ್ ನಲ್ಲಿ ಒಬ್ಬನೇ ಪೈಲಟ್ ಇದ್ದ ಎಂದು ಮೆರೈನ್ ಏರ್ ಕ್ರಾಫ್ಟ್ ವಿಂಗ್ ಹೇಳಿದೆ.
ಅಪಘಾತದ ಸ್ಥಳವು ಮೆರೈನ್ ಕಾರ್ಪ್ಸ್ ಏರ್ ಸ್ಟೇಷನ್ ಮಿರಾಮರ್ ಬಳಿ ಇದೆ. ಅಪಘಾತದ ನಂತರ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ತಂಡ ಖಚಿತಪಡಿಸಿದೆ. ಮೆರೈನ್ ಏರ್‌ಕ್ರಾಫ್ಟ್ ವಿಂಗ್ ಪೈಲಟ್ ಕುಟುಂಬಕ್ಕೆ ಸಂತಾಪ ತಿಳಿಸಿದ್ದು, ಈ ಫೈಟರ್ ಜೆಟ್ ಪತನದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.