ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ಯುದ್ಧ ತರಬೇತಿ ವಿಮಾನಗಳ ನಡುವೆ ಡಿಕ್ಕಿಯಾಗಿ ಮೂವರು ಸೇನಾ ಪೈಲಟ್ಗಳು ಸಾವನ್ನಪ್ಪಿರುವ ಘಟನೆ ಉಕ್ರೇನ್ನಲ್ಲಿ ನಡೆದಿದೆ.
ಕೀವ್ನ ಪಶ್ಚಿಮಕ್ಕೆ ಸುಮಾರು 140 ಕಿಲೋಮೀಟರ್ (87 ಮೈಲುಗಳು) ದೂರದಲ್ಲಿರುವ ಝೈಟೊಮಿರ್ ನಗರದ ಬಳಿ ಶುಕ್ರವಾರ, ಆಗಸ್ಟ್ 25 ರಂದು ಈ ಘಟನೆ ಸಂಭವಿಸಿದೆ. ಏರ್ ಫೋರ್ಸ್ ಪ್ರಕಾರ, ಎರಡು L-39 ಯುದ್ಧ ತರಬೇತುದಾರ ವಿಮಾನಗಳ ಸಿಬ್ಬಂದಿ ಯುದ್ಧ ಕಾರ್ಯಾಚರಣೆಯನ್ನು ನಿರ್ವಹಿಸುವಾಗ ಆಕಾಶದಲ್ಲಿ ಪರಸ್ಪರ ಡಿಕ್ಕಿ ಹೊಡೆದಿದೆ.
ಮೃತರ ಕುಟುಂಬಗಳಿಗೆ ವಾಯುಪಡೆ ಸಂತಾಪ ವ್ಯಕ್ತಪಡಿಸಿದ್ದು, “ಇದು ನಮಗೆಲ್ಲರಿಗೂ ನೋವಿನ ಮತ್ತು ತುಂಬಲಾರದ ನಷ್ಟವಾಗಿದೆ” ಎಂದು ಹೇಳಿದೆ.
ಅಪಘಾತದ ಸಂದರ್ಭಗಳನ್ನು ಸ್ಟೇಟ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಆಫ್ ಉಕ್ರೇನ್ (SBI) ತನಿಖೆ ನಡೆಸುತ್ತಿದೆ. ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ವಿಮಾನದ ತಾಂತ್ರಿಕ ಸ್ಥಿತಿ ಮತ್ತು ವಿಮಾನ ತಯಾರಿ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂಬ ಬಗ್ಗೆ ವಿಶೇಷ ಗಮನ ಹರಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
“ಪ್ರತಿಯೊಬ್ಬ ಸೈನಿಕನ ನಷ್ಟವು ಇಡೀ ದೇಶಕ್ಕೆ ದೊಡ್ಡ ನಷ್ಟವಾಗಿದೆ” ಎಂದ ಬ್ಯೂರೋ, ತಜ್ಞರು ಕಪ್ಪು ಪೆಟ್ಟಿಗೆಗಳ ಸಂಪೂರ್ಣ ತನಿಖೆ ನಡೆಸುವುದಾಗಿ ಎಸ್ಬಿಐ ತಿಳಿಸಿದೆ.