ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಪ್ರಯಾಣಿಕರ ನಡುವಿನ ಗಲಾಟೆಗಳು ದಿನಕ್ಕೊಂದರಂತೆ ಸುದ್ದಿಯಾಗುತ್ತಿವೆ. ಇಷ್ಟು ದಿನ ಮೆಟ್ರೂ ಆಯ್ತು ಈಗ ಆ ಸಾಲಿಗೆ ಡಿಟಿಸಿ ಬಸ್ ಸೇರಿದೆ. ದೆಹಲಿ ಸಾರಿಗೆ ಬಸ್‌ನಲ್ಲಿ ಮಹಿಳೆಯರ ನಡುವಿನ ಮಾರಾಮಾರಿಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.
ಈ ವೀಡಿಯೋದಲ್ಲಿ ಜಗಳ ಯಾವಾಗ ನಡೆದಿದೆ ಎಂಬುದು ತಿಳಿದಿಲ್ಲ, ಆದರೆ ಟ್ವಿಟ್ಟರ್ ಬಳಕೆದಾರರೊಬ್ಬರು ದೆಹಲಿ ಸರ್ಕಾರಿ ಬಸ್ಸಿನಲ್ಲಿ ಆಸನಕ್ಕಾಗಿ ಮಹಿಳೆಯರ ಕುಸ್ತಿ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇಬ್ಬರು ಮಹಿಳೆಯರು ಜುಟ್ಟು ಹಿಡಿದು ಹೊಡೆದಾಡಿರುವ ದೃಶ್ಯ ಕಂಡುಬಂದಿದೆ.
ಪ್ರಯಾಣಿಕರೊಬ್ಬರು ಚಿತ್ರೀಕರಿಸಿದ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣ ಸಖತ್ ಸುದ್ದಿಯಾಗಿದೆ. ಮಹಿಳೆಯರ ನಡುವೆಯೇ ಹೊಡೆದಾಟಗಲಾಗುತ್ತವೆ ಯಾಕೆ ಎಂಬ ಕಮೆಂಟ್‌ಗಳು ಬರುತ್ತಿವೆ.
Kalesh b/w Two Woman inside Delhi Government Bus over Seat issues pic.twitter.com/M1CWkaU5Xx
— Ghar Ke Kalesh (@gharkekalesh) August 26, 2023