ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊಸರನ್ನ ಅಂದ್ರೆ ಒಂದು ಅದ್ಭುತವಾದ ಅಡುಗೆ. ಆದರೆ ಅದನ್ನು ಮಾಡುವ ವಿಧಾನ ಮಾತ್ರ ಸರಿಯಾಗಿ ತಿಳಿದಿರಬೇಕು. ಹಾಗಿದ್ದಾಗ ಮಾತ್ರ ಅದನ್ನು ಸವಿಯಲು ನಿಮಗೆ ಇಷ್ಟವಾಗಬಹುದು.
ಮೊಸರನ್ನ ಮಾಡಲು ಬೇಕಾಗುವ ಸಾಮಾಗ್ರಿಗಳು
ಅಕ್ಕಿ
ನೀರು
ಮೊಸರು
ಸೌತೆಕಾಯಿ
ದಾಳಿಂಬೆ ಬೀಜ
ಶುಂಠಿ
ಮೆಣಸಿನ ಕಾಯಿ
ಕೊತ್ತಂಬರಿ ಸೊಪ್ಪು
ಉಪ್ಪು
ಎಣ್ಣೆ
ಸಾಸಿವೆ ಕಾಳು
ಜೀರಿಗೆ
ಇಂಗು
ಕರಿಬೇವಿನ ಎಲೆ
ಒಣಮೆಣಸು
ಮಾಡುವ ವಿಧಾನ :
* ಮೊದಲು ಕುಕ್ಕರ್ನಲ್ಲಿ ಅನ್ನ ಮಾಡಿಕೊಳ್ಳಿ.
* ಈಗ ಒಂದು ಪಾತ್ರೆಯಲ್ಲಿ ಮೊಸರಿನೊಂದಿಗೆ ಅನ್ನವನ್ನು ಬೆರೆಸಿ.
* ಅದಕ್ಕೆ ಹೆಚ್ಚಿಕೊಂಡ ಸೌತೆಕಾಯಿ ಮತ್ತು ದಾಳಿಂಬೆ ಬೀಜವನ್ನು ಸೇರಿಸಿ.
* ಇದರೊಟ್ಟಿಗೆ ಶುಂಠಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಸೇರಿಸಿ.
* ಈಗ ಇನ್ನೊಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿಮಾಡಿಕೊಳ್ಳಿ. ಅದಕ್ಕೆ ಸಾಸಿವೆ, ಜೀರಿಗೆ, ಇಂಗು, ಕರಿಬೇವಿನ ಎಲೆ, ಒಣಮೆಣಸನ್ನು ಸೇರಿಸಿ ಒಂದು ಒಗ್ಗರಣೆಯನ್ನು ತಯಾರಿಸಿ.
* ಅನ್ನ ಮತ್ತು ಮೊಸರಿನ ಮಿಶ್ರಣಕ್ಕೆ ಒಗ್ಗರಣೆಯನ್ನು ಹಾಕಿ.
* ನಂತರ ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ, ಸವಿಯಲು ನೀಡಿ.