ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ದಿ ಹಂಡ್ರೆಡ್ ಲೀಗ್ ಫೈನಲ್ ಪಂದ್ಯದಲ್ಲಿ ಸದರ್ನ್ ಬ್ರೇವ್ಸ್ ಗೆಲುವು ಸಾಧಿಸಿ ಚಾಂಪಿಯನ್ಸ್ ಎನಿಸಿಕೊಂಡಿದೆ.
ನಾದರ್ನ್ ಸೂಪರ್‌ಚಾರ್ಜರ್ ಟೀಂನ್ನು ಸೋಲಿಸಿದ ಸದರ್ನ್ ಬ್ರೇವ್ ತಂಡದಲ್ಲಿ ನಮ್ಮ ಟೀಂ ಇಂಡಿಯಾದ ಉಪನಾಯಕಿ ಸ್ಮೃತಿ ಮಂಧಾನಾ ಆಡಿದ್ದಾರೆ. ಇನ್ನು ಸೋಲು ಅನುಭವಿಸಿದ ತಂಡದಲ್ಲಿಯೂ ನಮ್ಮ ಟೀಂನ ಸ್ಟಾರ್ ಬ್ಯಾಟರ್ ಜೆಮಿಮಾ ರಾಡ್ರಿಗಸ್ ಆಡಿದ್ದಾರೆ.
ಇಡೀ ಸರಣಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಸ್ಮೃತಿ ಮಂಧಾನಾ ಫೈನಲ್ ಪಂದ್ಯದಲ್ಲಿ ನಾಲ್ಕು ರನ್‌ಗೆ ಔಟ್ ಆಗಿದ್ದಾರೆ.