RECIPE| ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ಟ್ರೈ ಮಾಡಿ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ. ಹಾಗಾದ್ರೆ ಮತ್ಯಾಕೆ ತಡ ಅವರೆಕಾಳು ಚಿತ್ರಾನ್ನ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು:

ಬೇಯಿಸಿದ ಅಕ್ಕಿ
ಎಣ್ಣೆ
ಬೀನ್ಸ್
ತೆಂಗಿನಕಾಯಿ
ಹಸಿಮೆಣಸಿನಕಾಯಿ
ಉಪ್ಪು
ಸಾಸಿವೆ
ಕಡಲೆ ಬೇಳೆ
ಉದ್ದಿನ ಬೇಳೆ
ಅರಿಶಿಣ
ಕಸೂರಿ ಮೆಂತೆ ಪುಡಿ
ಕೊತ್ತಂಬರಿ ಸೊಪ್ಪು
ಕರಿಬೇವು

ತಯಾರಿಸುವ ವಿಧಾನ:

* ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ.
* ಬಿಸಿಯಾದ ಎಣ್ಣೆಗೆ ಸಾಸಿವೆ, ಕಡ್ಲೇ ಬೇಳೆ ಮತ್ತು ಹೆಸರು ಬೇಳೆಯನ್ನು ಸೇರಿಸಿ 2 ನಿಮಿಷಗಳ ಕಾಲ ಹುರಿಯಿರಿ.
* ಬಳಿಕ ಅರಿಶಿನ, ಹಸಿ ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಸೇರಿಸಿ ಒಂದು ನಿಮಿಷಗಳ ಕಾಲ ಬೇಯಿಸಿ.
* ನಂತರ ಅದಕ್ಕೆ ಬೇಯಿಸಿದ ಅವರೆಕಾಳನ್ನು ಸೇರಿಸಿ. ನಂತರ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು ಮತ್ತು ತೆಂಗಿನ ತುರಿಯನ್ನು ಹಾಕಿ, ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಬೆರೆಸಿ.
* ಬಳಿಕ ಅದಕ್ಕೆ ಅನ್ನ, ಮೇಥಿ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ.

ಬಿಸಿ ಬಿಸಿಯಾಗಿರುವಾಗಲೇ ಸವಿದು ನೋಡಿ ಅವರೆಕಾಳು ಚಿತ್ರಾನ್ನ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!