ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಜೆ ವೇಳೆ ಟೀ ಜೊತೆ ಸವಿಯಲು ಟ್ರೈ ಮಾಡಿ ನೋಡಿ ರವೆ ವಡೆ.
ಬೇಕಾಗುವ ಪದಾರ್ಥಗಳು:
ಉಪ್ಪು
ಎಣ್ಣೆ
ರವೆ
ಜೀರಿಗೆ
ಮೆಣಸಿನ ಹುಡಿ
ಕರಿಬೇವಿನ ಎಲೆಗಳು
ಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
ನಿಂಬೆ ರಸ
ಎಣ್ಣೆ
ಮಾಡುವ ವಿಧಾನ:
* ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ ನೀರು, ಉಪ್ಪು ಮತ್ತು ಎಣ್ಣೆಯನ್ನು ಹಾಕಿ, ಕುದಿಯಲು ಬಿಡಿ. * ನೀರು ಕುದಿಯಲು ಪ್ರಾರಂಭಿಸಿದ ನಂತರ ರವಾ ಸೇರಿಸಿ, ನಿರಂತರವಾಗಿ ಬೆರೆಸಿ, ರವೆ ನೀರನ್ನು ಹೀರಿಕೊಳ್ಳುವವರೆಗೆ ಬೆರೆಸಿ.
* ಬೇಯಿಸಿದ ರವೆಯನ್ನು ದೊಡ್ಡ ಬಟ್ಟಲಿಗೆ ಹಾಕಿ. ಅದಕ್ಕೆ ಜೀರಿಗೆ, ಮೆಣಸಿನ ಹುಡಿ, ಕರಿಬೇವಿನ ಎಲೆಗಳು, ಹೆಚ್ಚಿದ ಮೆಣಸಿನಕಾಯಿ, ಕೊತ್ತಂಬರಿ ಮತ್ತು ನಿಂಬೆ ರಸವನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಕೈಗೆ ಎಣ್ಣೆ ಹಚ್ಚಿಕೊಂಡು, ಮಿಶ್ರಣದ ಉಂಡೆ ತೆಗೆದುಕೊಂಡು, ವಡೆಯ ಆಕಾರಕ್ಕೆ ತಟ್ಟಿ ಎಣ್ಣೆಯಲ್ಲಿ ಹಾಕಿ.
*ಈಗ ಬಿಸಿ ಎಣ್ಣೆಯಲ್ಲಿ ವಡೆವನ್ನು ಡೀಪ್ ಫ್ರೈ ಮಾಡಿ ನಂತರ ಸವಿಯಿರಿ.