ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರದ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಡ್ಯಾಂನಲ್ಲಿ ನಾಳೆ ಸಿಎಂ ಸಿದ್ದರಾಮಯ್ಯ ನದಿಗೆ ಬಾಗಿನ ಅರ್ಪಿಸಲಿದ್ದಾರೆ.
ಡ್ಯಾಂನಲ್ಲಿ ಕೃಷ್ಣಾ ಭಾಗ್ಯ ಜಾಲ ನಿಯಮಿತದಿಂದ ಗಂಗಾ ಪೂಜೆ ಆಯೋಜಿಸಲಾಗಿದ್ದು, ಇದೇ ವೇಳೆ ಸಿಎಂ ಬಾಗಿನವನ್ನು ಅರ್ಪಿಸಲಿದ್ದಾರೆ. ಆಲಮಟ್ಟಿ ಡ್ಯಾಂ ಆವರಣದಲ್ಲಿ ಮೊದಲು ಪೂಜೆ ನೆರವೇರಿಸಿ ನಂತರ ಬಾಗೀನ ಅರ್ಪಿಸಲಿದ್ದಾರೆ.
ಸಚಿವ ಎಂ.ಬಿ. ಪಾಟೀಲ ಹಾಗೂ ಇನ್ನಿತರ ಶಾಸಕರು ಜತೆಯಲ್ಲಿರಲಿದ್ದಾರೆ.