ಹೊಸದಿಗಂತ ಡಿಜಿಟಲ್ ಡೆಸ್ಕ್:
ಧುರಂಧರ್ ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದೆ. ಮೂರನೇ ವಾರಾಂತ್ಯಕ್ಕೆ ಕಾಲಿಟಿದ್ದು, ಭರ್ಜರಿ 600 ಕೋಟಿ ರೂ.ಯತ್ತ ಕಾಲಿಡುತ್ತಿದೆ.
ಡಿ.5ರಂದು ತೆರೆಕಂಡಿರುವ ಧುರಂಧರ್ ಸಿನಿಮಾ ರಣವೀರ್ ಸಿಂಗ್ ಅವರ ಮಾಸ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಒಂದೆಡೆ ಸಿನಿಮಾ 600 ಕೋಟಿಯತ್ತ ಸಾಗುತ್ತಾ ಬಾಕ್ಸಾಫೀಸ್ನಲ್ಲಿ ಭಾರೀ ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ಭಾರತದಲ್ಲಿ ಸಾರ್ವಕಾಲಿಕವಾಗಿ ಅತಿ ಹೆಚ್ಚು ನಿವ್ವಳ ಗಳಿಕೆ ಮಾಡಿದ ಹಿಂದಿ ಸಿನಿಮಾ ಆಗಿ ಹೊರಹೊಮ್ಮಿದ್ದು, ಪುಷ್ಪ 2 (ಹಿಂದಿ) ಅನ್ನು ಹಿಂದಿಕ್ಕಲಿದೆ.
ಸಿನಿಮಾದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಆರ್ ಮಾಧವನ್, ಸಂಜಯ್ ದತ್ ಸೇರಿದಂತೆ ಎಲ್ಲರ ಅಭಿನಯ ತೆರೆಯ ಮೇಲೆ ರೋಚಕವಾಗಿ ಮೂಡಿಬಂದಿದೆ.

