September 27, 2026
Sunday, September 27, 2026
spot_img

ರಶ್ಮಿಕಾ- ವಿಜಯ್‌ ಪೋಸ್ಟ್‌ ವೆಡ್ಡಿಂಗ್‌ ಮುಗಿಯುತ್ತಲೇ ಇಲ್ಲ, ಅಭಿಮಾನಿಗಳ ಜತೆ ಊಟ ಮಾಡಿದ ಜೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆಯಾದ ನಂತರ ಸಾಕಷ್ಟು ಪಬ್ಲಿಕ್‌ ಅಪೀಯರೆನ್ಸ್‌ ನೀಡಿದ್ದಾರೆ. ಮದುವೆಯ ತಕ್ಷಣವೇ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಜೋಡಿ, ನಂತರ ವಿಜಯ್‌ ಹುಟ್ಟೂರಿನಲ್ಲಿ, ಸತ್ಯನಾರಾಯಣ ಪೂಜೆಯಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ರಶ್ಮಿಕಾ ಹಾಗೂ ವಿಜಯ್‌ ಅಭಿಮಾನಿಗಳ ಜೊತೆ ಮಾತುಕತೆ ನಡೆಸಿ ಊಟ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ರಶ್ಮಿಕಾ ಫ್ಯಾನ್‌ಪೇಜ್‌ ನಡೆಸುವ ಅಭಿಮಾನಿಗಳನ್ನು ಕರೆದಿದ್ದಾರೆ. ಪ್ರತೀ ಅಭಿಮಾನಿಗೂ ಹ್ಯಾಂಡ್‌ಶೇರ್‌ ನೀಡಿದ ವಿರೋಷ್‌ ಕೆಲವರಿಗೆ ಹಗ್‌ ಕೂಡ ಮಾಡಿದ್ದಾರೆ.

ಸಿಂಪಲ್‌ ಸೀರೆಯಲ್ಲಿ ರಶ್ಮಿಕಾ ಬ್ಯೂಟಿಫುಲ್‌ ಆಗಿ ಕಾಣಿಸಿದ್ದಾರೆ. ನಮ್ಮ ಸೌತ್‌ನಲ್ಲಿ ಮದುವೆಯಾದ ನಂತರ ಹೆಣ್ಣುಮಕ್ಕಳು ಯಾವ ರೀತಿ ಇರುತ್ತಾರೆಯೋ ರಶ್ಮಿಕಾ ಅದೇ ರೀತಿ ಕಾಣಿಸಿದ್ದಾರೆ. ಯಾವುದೇ ಆಡಂಬರದ ಬಟ್ಟೆ, ಮೇಕಪ್‌ ಇಲ್ಲದೆ ಸಿಂಪಲ್‌ ಆಗಿ ಮಿಂಚಿದ್ದಾರೆ.

Must Read