ಹೊಸದಿಗಂತ ಡಿಜಿಟಲ್ ಡೆಸ್ಕ್:
ವೃದ್ಧನ ಮೇಲೆ ಕುಪಿತಗೊಂಡ ಹಸುವೊಂದು ದಾಳಿ ನಡೆಸಿ ನೂರು ಮೀಟರ್ವರೆಗೂ ಎಳೆದೊಯ್ದ ಘಟನೆ ಪಂಜಾಬ್ನಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯಗಳು ಬೆಚ್ಚಿ ಬೀಳಿಸುವಂತಿವೆ.
ಮೊಹಾಲಿಯ ಪುನ್ನಲ್ಲಿ ಹಸುವೊಂದು 83 ವರ್ಷದ ವ್ಯಕ್ತಿ ಮೇಲೆ ಹಲ್ಲೆ ನಡೆಸಿ 100 ಮೀಟರ್ವರೆಗೂ ರಸ್ತೆಯಲ್ಲಿ ಎಳೆದೊಯ್ದಿದೆ. ಈ ದಾರುಣ ಘಟನೆಯಲ್ಲಿ ಗಂಭೀರ ಗಾಯಗೊಂಡ ವೃದ್ಧ ಪ್ರಾಣ ಕಳೆದುಕೊಂಡಿದ್ದಾರೆ. ಅವರನ್ನು ರಕ್ಷಿಸಲು ಸವಾರರು ಪ್ರಯತ್ನಪಟ್ಟರೂ ಫಲ ಸಿಗಲಿಲ್ಲ.
ಈ ಘಟನೆಯಲ್ಲಿ ಮೃತಪಟ್ಟ ವೃದ್ಧನನ್ನು ಸರೂಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಹಸು ಆತನನ್ನು ಎಳೆದೊಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯಾವಳಿಗಳನ್ನು ನೋಡಿದ ನೆಟಿಜನ್ಗಳು ಬೆಚ್ಚಿಬಿದ್ದಿದ್ದಾರೆ.
Elderly man dies after stray cow drags him for about 100 meters, collides with several vehicles in Punjab's Mohali.
The deceased was identified as 83-year-old Saroop Singh.#Punjab #Mohali pic.twitter.com/kCuRcpDAMM
— Vani Mehrotra (@vani_mehrotra) September 2, 2023