ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಪಲ್ಲೆಕೆಲೆಯಲ್ಲಿ ಪಾಕಿಸ್ತಾನ-ಭಾರತ ನಡುವೆ ಏಷ್ಯಾಕಪ್ ಕದನ ನಡೆಯಲಿದೆ.
ಆದರೆ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.
ಪಲ್ಲೆಕೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಟಾಸ್ ವಿಳಂಬವಾಗುವ ಸಾಧ್ಯತೆ ಇದೆ. ಮಧ್ಯಾಹ್ನ 3 ಗಂಟೆಗೆ ಮ್ಯಾಚ್ ಆರಂಭವಾಗಬೇಕಿತ್ತು. ಅದಕ್ಕೂ ಅರ್ಧ ಗಂಟೆ ಮುನ್ನ ಟಾಸ್ ನಡೆಯುತ್ತದೆ. ಆದರೆ ಮಳೆ ಕಾರಣದಿಂದಾಗಿ ಟಾಸ್ ವಿಳಂಬವಾಗುವ ಸಾಧ್ಯತೆ ಇದೆ.
ಮಳೆಯಿಂದಾಗಿ ಪಿಚ್‌ಗೆ ಹೊದಿಕೆ ಮುಚ್ಚಲಾಗಿದೆ. ವರುಣದ ಆರ್ಭಟ ನಿಂತರೆ ಪಂದ್ಯ ಆರಂಭವಾಗಲಿದೆ. ಬೆಳಗ್ಗೆ ಮಳೆ ಬ್ರೇಕ್ ಕೊಟ್ಟ ಕಾರಣ ಪಿಚ್ ಹೊದಿಕೆ ತೆರೆಯಲಾಗಿತ್ತು. ಆದರೆ ಪಂದ್ಯಕ್ಕೆ ಇನ್ನೇನು ಅರ್ಧ ಗಂಟೆ ಬಾಕಿ ಇರುವಂತೆ ಮತ್ತೆ ಮಳೆ ಸುರಿಯುತ್ತಿದೆ. ಪಂದ್ಯ ನಡೆಯಲಿದ್ಯಾ ಅಥವಾ ಇಲ್ಲವಾ? ಎಲ್ಲವೂ ವರುಣರಾಯನ ಮೇಲೆ ನಿರ್ಧರಿತವಾಗಿದೆ.