ಗದರ್-2 ಸಿನಿಮಾ ಸಕ್ಸಸ್‌ ಪಾರ್ಟಿ: ಸಲ್ಮಾನ್, ಶಾರುಖ್ ಸೇರಿ ಭಾಗಿಯಾದ ಬಾಲಿವುಡ್ ಮಂದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಬಾಲಿವುಡ್‌ನಲ್ಲಿ, ಹಿರಿಯ ನಾಯಕ ಸನ್ನಿ ಡಿಯೋಲ್ ಗದರ್ 2 ಚಿತ್ರದೊಂದಿಗೆ ಸಖತ್‌ ಹೆಸರು ಮಾಡಿದ್ದಾರೆ. ಗದರ್ 2 ಚಿತ್ರವು 2001ರಲ್ಲಿ ರಿಲೀಸ್‌ ಆದ ಗದರ್ ಚಿತ್ರದ ಮುಂದುವರಿದ ಭಾಗವಾಗಿದೆ. ಈ ಚಿತ್ರದಲ್ಲಿ ಅಮೀಷಾ ಪಟೇಲ್ ನಾಯಕಿಯಾಗಿ ನಟಿಸಿದ್ದಾರೆ. ಪಾಕಿಸ್ತಾನ-ಭಾರತ ಗಡಿ ಕಥೆಯ ಜೊತೆಗೆ ಲವ್ ಸ್ಟೋರಿಯನ್ನೂ ಭಾವನಾತ್ಮಕವಾಗಿ ಮಾಡಲಾಗಿದೆ.

ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಗದರ್ 2 ಹಿಟ್ ಆಗಿದೆ. ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಗದರ್ 2 ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು, ಈಗಾಗಲೇ 480 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಗದರ್ 2 ಈ ವಾರಾಂತ್ಯದಲ್ಲಿ 500 ಕೋಟಿ ಕ್ಲಬ್ ಸೇರಲಿದೆ. ಈ ಸಿನಿಮಾ 100 ಕೋಟಿ ಗಳಿಕೆಯಲ್ಲಿ ತೆರೆಕಂಡಿದ್ದು, ಎಲ್ಲೆಡೆ ಬ್ರೇಕ್ ಈವ್ ಆಗಿ ಫುಲ್ ಲಾಭದಲ್ಲಿದೆ.

ಗದರ್ 2 ಚಿತ್ರದ ಯಶಸ್ಸಿನ ಬಗ್ಗೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದ್ದು, ಈಗಾಗಲೇ ಹಲವು ಸಕ್ಸಸ್ ಮೀಟ್ ಗಳನ್ನು ಆಯೋಜಿಸಿರುವ ಚಿತ್ರತಂಡ ಬಾಲಿವುಡ್ ನಲ್ಲಿ ವಿಶೇಷ ಸಕ್ಸಸ್ ಪಾರ್ಟಿ ಆಯೋಜಿಸಿದೆ. ಗದರ್ 2 ಸಕ್ಸಸ್ ಪಾರ್ಟಿಗೆ ಎಲ್ಲಾ ಬಾಲಿವುಡ್ ತಾರೆಯರನ್ನು ಆಹ್ವಾನಿಸಲಾಗಿತ್ತು. ಶನಿವಾರ ರಾತ್ರಿ ಮುಂಬೈನ ಖಾಸಗಿ ಜಾಗದಲ್ಲಿ ಗದರ್ 2 ಸಕ್ಸಸ್ ಪಾರ್ಟಿ ಅದ್ಧೂರಿಯಾಗಿ ನಡೆಯಿತು. ಈ ಪಾರ್ಟಿಗೆ ಬಾಲಿವುಡ್ ತಾರೆಯರೆಲ್ಲಾ ಬಂದಿದ್ದರು.

ಸಲ್ಮಾನ್ ಖಾನ್, ಶಾರುಖ್ ಖಾನ್ ಫ್ಯಾಮಿಲಿ, ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ, ಸಾರಾ ಅಲಿ ಖಾನ್, ಕೃತಿ ಸನೋನ್, ಅಮೀರ್ ಖಾನ್, ರಾಕುಲ್ ಪ್ರೀತ್ ಸಿಂಗ್, ಶಿಲ್ಪಾ ಶೆಟ್ಟಿ, ಅನನ್ಯಾ ಪಾಂಡೆ, ಬಾಬಿ ಡಿಯೋಲ್, ಸುನಿಲ್ ಶೆಟ್ಟಿ, ಅನಿಲ್ ಕಪೂರ್, ಅಕ್ಷಯ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!