ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಂಚುರಿ ಸ್ಟಾರ್ ಶಿವಣ್ಣ ಎಂದರೆ ಎನೋ ಎನರ್ಜಿ. ಅರವತ್ತು ವರ್ಷ ದಾಟಿದರೂ ಅತ್ಯಂತ ಉತ್ಸಾಹ, ಸದಾ ಹುಮ್ಮಸ್ಸಿನಿಂದ ಇರುತ್ತಾರೆ. ಅವರ ಸಿನಿಮಾಗಳಲ್ಲಿ ಡಾನ್ಸ್ಗೂ ಯಾವುದೇ ಕೊರತೆ ಇಲ್ಲ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಅದಕ್ಕೆ ಮತ್ತೊಂದು ತಾಜಾ ಉದಾಹರಣೆಯಾಗಿ ಅಮೆರಿಕದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಶಿವಣ್ಣ ಹಾಕಿದ ಮಾಸ್ ನೃತ್ಯವೇ ಸಾಕ್ಷಿ.
ಅಮೆರಿಕದ ಟೆಕ್ಸಾಸ್ನಲ್ಲಿ ‘ನಾವಿಕ ವಿಶ್ವ ಕನ್ನಡ ಸಮಾವೇಶ’ ನಡೆಯುತ್ತಿದ್ದು, ಸೆಪ್ಟೆಂಬರ್ 1ರಿಂದ ಸೆಪ್ಟೆಂಬರ್ 3ರವರೆಗೂ ಮೂರು ದಿನಗಳ ಕಾಲ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗಿಯಾದ ಶಿವಣ್ಣ ಕನ್ನಡದ ಮನೆ ಮಗನಂತೆ ಪಂಚೆಯುಟ್ಟು ವೇದಿಕೆಯಲ್ಲಿ ನೃತ್ಯ ಮಾಡಿರುವ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.
ಪಂಚೆಯಲ್ಲಿ ಮದುಮಗನಂತೆ ಕಾಣುತ್ತಿರುವ ಶಿವಣ್ಣನ ಡಾನ್ಸ್ಗೆ ಫಿದಾ ಅಗದವರೇ ಇಲ್ಲ ಬಿಡಿ. ಸಾಲು ಸಾಲು ಸಿನಿಮಾಗಳ ಬ್ಯುಸಿ ಶೆಡ್ಯೂಲ್ನಲ್ಲಿಯೂ ಶಿವಣ್ಣ ನಾವಿಕ ವಿಶ್ವ ಕನ್ನಡ ಸಮಾವೇಶದಲ್ಲಿ ಭಾಗಿಯಾಗಿ ಅಮೆರಿಕದಲ್ಲಿನ ತಮ್ಮ ಅಭಿಮಾನಿಗಳನ್ನು ರಂಜಿಸಿದರು.