ಹೊಸದಿಗಂತ ವರದಿ ಹುಬ್ಬಳ್ಳಿ:
ಮಹದಾಯಿ ಯೋಜನೆಯನ್ನು ಅನುಷ್ಠಾನಗೊಳಿಸುವವರೆಗೂ ನಾವು ಹೋರಾಟ ಮಾಡುತ್ತೇವೆ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಒತ್ತಡ ಹಾಕುತ್ತೇವೆ ಎಂದು ಶಾಸಕ ಎನ್.ಎಚ್. ಕೋನರೆಡ್ಡಿ ಹೇಳಿದರು.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮಹದಾಯಿ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಬಿಜೆಪಿ ನಾಯಕರು ವಿಜಯೋತ್ಸವ ನಡೆಸಿದರು. ಈಗ ಅವರು ಇದರ ಕುರಿತು ಯಾವುದೇ ಉತ್ತರ ನೀಡುತ್ತಿಲ್ಲ ಎಂದರು.
ಜೆಡಿಎಸ್ ನಲ್ಲಿ ಇದ್ದಾಗಲೂ ಮಹದಾಯಿ ಹೋರಾಟ ಮಾಡಿದ್ದೇನೆ. ಈ ವಿಚಾರವಾಗಿ ಯಾವಾಗಲೂ ಮಾತನಾಡುವುದನ್ನು ಬಿಟ್ಟಿಲ್ಲ. ಕಾವೇರಿ, ಕೃಷ್ಣ ಎರಡು ಕಣ್ಣುಗಳಿದ್ದ ಹಾಗೆ, ಕರ್ನಾಟಕದಲ್ಲಿ ನೀರು ಇಲ್ಲದೇ ಇದ್ದಾಗ ತಮಿಳುನಾಡು, ಆಂಧ್ರಪ್ರದೇಶಗಳು ನೀರು ಕೊಡಿ ಅಂತ ಕೇಳುತ್ತಿದ್ದಾರೆ. ನಮಗೇ ನೀರಿಲ್ಲ, ಇನ್ನು ಅವರಿಗೆ ಹೇಗೆ ನೀರು ಬಿಡೋದು ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ನೀರಿಲ್ಲ, ಇನ್ನು ಕಾವೇರಿ ನೀರು ಕೇಳಿದ್ರೆ ನಮ್ಮ ರೈತರು ಏನು ಮಾಡಬೇಕು?
ರೈತರು ಎಲ್ಲಾ ಕಡೆ ಹೋರಾಟ ಮಾಡ್ತಾ ಇದ್ದಾರೆ. ನೀರಿಲ್ಲದ ಸಮಯದಲ್ಲಿ ನ್ಯಾಯಾಲಯದ ಆದೇಶ ಹೇಗೆ ಪಾಲಿಸಬೇಕು? ಇದು ಗಂಭೀರ ಸಮಸ್ಯೆಯಾಗಿದೆ ಎಂದರು.
ಈ ಕುರಿತು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಿಯೋಗವು ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಿದರು.