ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿಗೆ ತಿರುಗೇಟು ನೀಡಲು ಹೋದ ಇಂಡಿಯಾ ಮೈತ್ರಿ ಒಕ್ಕೂಟ ಪಕ್ಷ ಪೇಚಿಗೆ ಸಿಲುಕಿದೆ.
ಶ್ರಾವಣ ಮಾಸದಲ್ಲಿ ನೀವು ಅಶ್ಲೀಲ ವಿಡಿಯೋ ನೋಡುವುದಿಲ್ಲವೇ ಎಂದು ಆರ್ಜೆಡಿ ನಾಯಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಆದರೆ ಈ ಹೇಳಿಕೆಗೆ ಬಾರಿ ಆಕ್ಷೇಪ ವ್ಯಕ್ತವಾಗಿದೆ. ಹಿಂದುಧಾರ್ಮಿಕ ನಂಬಿಕೆ, ಆಚರಣೆಯನ್ನು ಗೇಲಿ ಮಾಡಿ ಕೋಟ್ಯಾಂತರ ಜನರ ನಂಬಿಕೆಯನ್ನೇ ಪ್ರಶ್ನಿಸಿದ್ದೀರಿ ಎಂದು ಟೀಕೆಗಳು ವ್ಯಕ್ತವಾಗುತ್ತಿದೆ.
ಇತ್ತೀಚೆಗೆ ಲಾಲು ಪ್ರಸಾದ್ ಯಾದವ್ ಹಾಗೂ ರಾಹುಲ್ ಗಾಂಧಿ ಫೋಟೋ ಭಾರಿ ವೈರಲ್ ಆಗಿತ್ತು. ಮಟನ್ ಮಾಂಸಾಹಾರ ತಯಾರಿಸುತ್ತಿದ್ದಈ ಫೋಟೋಗೆ ಪರ ವಿರೋಧಗಳು ವ್ಯಕ್ತವಾಗಿತ್ತು. ಜನಿವಾರಧಾರಿ ರಾಹುಲ್ ಗಾಂಧಿ ಮಾಂಸಾಹಾರ ಸೇವಿಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿತ್ತು. ಲಾಲೂ ಪ್ರಸಾದ್ ಯಾದವ್ ವಿರುದ್ಧ ಬಿಹಾರ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಆಕ್ರೋಶ ಹೊರಹಾಕಿದ್ದರು. ಶ್ರಾವಣ ಪವಿತ್ರ ಮಾಸದಲ್ಲಿ ಲಾಲೂ ಪ್ರಸಾದ್ ಯಾದವ್ ಮಟನ್ ತಿಂದಿದ್ದಾರೆ ಎಂದು ಟೀಕಿಸಿದ್ದರು.
ಈ ಹೇಳಿಕೆಗೆ ಆರ್ಜೆಡಿ ನಾಯಕ ಪಪ್ಪು ಯಾದವ್ ತಿರುಗೇಟು ನೀಡುವ ಭರದಲ್ಲಿ ಸುಶೀಲ್ ಕುಮಾರ್ ಮೋದಿ, ನೀವು ಮಂಗಳವಾರ, ಬುಧವಾರ ಹಾಗೂ ಶ್ರಾವಣದಲ್ಲಿ ಮಾಂಸಾಹಾರ ತ್ಯಜಿಸಿದ್ದೀರಾ? ರಾಜಕೀಯ ನಾಯಕರು ಅಶ್ಲೀಲ ಚಿತ್ರ ನೋಡುವುದನ್ನು ಬಿಡುತ್ತಾರಾ? ಮದ್ಯ ಸೇವನೆ ಮಾಡುದಿಲ್ಲವೇ? ಮಾಂಸಾಹಾರಕ್ಕೆ ಜಾತಿ ತರುತ್ತಿರುವುದೇಕೆ? ನಿಮ್ಮ ಫೋನ್ ಚೆಕ್ ಮಾಡಿ, ನೀವು ಶ್ರಾವಣ ಮಾಸದಲ್ಲಿ ಎಷ್ಟು ಅಶ್ಲೀಲ ವಿಡಿಯೋ ವೀಕ್ಷಿಸಿದ್ದೀರಿ? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.
ಪಪ್ಪು ಯಾದವ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.