ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಪೊಲೀಸ್ ಕಂಟ್ರೋಲ್ ರೂಂಗೆ ಬರೋಬ್ಬರಿ 39ಬಾರಿ ಬೆದರಿಕೆ ಕರೆ ಬಂದಿದೆ! ಹೌದು, ಮಾನಸಿಕ ಅಸ್ವಸ್ಥೆಯಾದ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ಕರೆ ಮಾಡಿ, ನೀವು ಇರುವ ಕಟ್ಟಡದಲ್ಲಿ ಬಾಂಬ್ ಇದೆ ಎಂದು ಹೇಳಿದ್ದಾಳೆ.
ಮೊದಲನೇ ಬಾರಿ ಕರೆಯನ್ನು ಗಮಭೀರವಾಗಿ ತೆಗೆದುಕೊಂಡು ಪೊಲೀಸರು ಕರೆ ಎಲ್ಲಿಂದ ಬಂತು ಎನ್ನುವ ಹುಟುಕಾಟದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಒಟ್ಟಾರೆ 39ಬಾರಿ ಕರೆ ಮಾಡಿ ಬಾಂಬ್ ಇದೆ ಎಂದು ಮಹಿಳೆ ಹೇಳಿದ್ದಾರೆ.
ಆಳಕ್ಕೆ ಇಳಿದಂತೆ ಮಾನಸಿಕ ಅಸ್ವಸ್ಥ ಮಹಿಳೆ ಕರೆ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಇದು ಹುಸಿ ಬಾಂಬ್ ಕರೆ ಎಂದು ತಿಳಿದಿದೆ.