ಹೊಸದಿಗಂತ ವರದಿ ಮುಂಡಗೋಡ:
ಪಟ್ಟಣದಿಂದ ಕೋಣನಕೇರಿ ಗ್ರಾಮಕ್ಕೆ ಹೋಗುತ್ತಿರುವ ಬೈಕ್ ಸವಾರನಿಗೆ ಇನ್ನೊಂದು ಬೈಕ್ ಮೇಲೆ ಬಂದ ಸವಾರರಿಬ್ಬರು ಕುತ್ತಿಗೆಗೆ ಟಾವೇಲ್ ನಿಂದ ಕತ್ತಿಗೆ ಬಿಗಿಯಾಗಿ ಹಿಡಿದು ಮೊಬೈಲ್ ಪೋನ್ ಕಸಿದುಕೊಂಡು ಪರಾರಿಯಾದ ಘಟನೆ ತಾಲೂಕಿನ ಸನವಳ್ಳಿ ಜಲಾಶಯದ ಪಕ್ಕದಲ್ಲಿರುವ ಈಶ್ವರ ದೇವಸ್ಥಾನದ ಹತ್ತಿರ ಜರುಗಿದ್ದು ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಪ್ರಶಾಂತ ಕಾಮನಳ್ಳಿ ಎಂಬುವರು ಮೊಬೈಲ್ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಇವರು ಮುಂಡಗೋಡದಿಂದ ಕೋಣನಕೇರಿ ಗ್ರಾಮಕ್ಕೆ ಮಂಗಳವಾರ ಸಾಯಂಕಾಲ ತಮ್ಮ ಬೈಕ್ ಮೇಲೆ ಒಬ್ಬರೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಬೈಕ್ ಒಂದರಲ್ಲಿ ಇಬ್ಬರು ಬಂದು ನಮ್ಮ ಹುಡಗನನ್ನು ಭಂದ್ರಾಪೂರ ಗ್ರಾಮಕ್ಕೆ ಸ್ವಲ್ಪ ಬೀಡಿ ಎಂದು ಕೇಳಿದ್ದಾರೆ. ತಾನೂ ಒಬ್ಬನೆ ಹೋಗುತ್ತಿದ್ದೇನೆ ಬನ್ನಿ ಎಂದು ಪ್ರಶಾಂತ ಬೈಕ್ ನಿಲ್ಲಿಸಿದ್ದಾನೆ .
ಹಿಂಬದಿಯಿಂದ ಬಂದ ಬೈಕ್ ಸವಾರರಿಬ್ಬರು ಏಕಾಏಕಿ ಕುತ್ತಿಗೆಗೆ ಟಾವೇಲ್ ನಿಂದ ಗಟ್ಟಿಯಾಗಿ ಸುತ್ತಿ 18 ಸಾವಿರ ರೂಪಾಯಿ ಬೆಲೆ ಬಾಳುವ ಮೋಬೈಲ್ ಪೋನ್ ನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಪೋನ್ ಕಳೆದುಕೊಂಡ ವ್ಯಕ್ತಿ ತನಗೇನಾದರು ಮಾಡುತ್ತಾರೋ ಎಂಬ ಭಯದಿಂದ ಅರ್ಧಗಂಟೆ ಅಲ್ಲಿಯೆ ನಿಂತು ಬೇರೆ ವಾಹನ ಬಂದ ಮೇಲೆ ಅವರೊಂದಿಗೆ ತಮ್ಮ ಗ್ರಾಮವನ್ನು ಸೇರಿದ್ದಾರೆ.