ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಐಸಿಸ್ ಉಗ್ರ ಸೈಯದ್ ನಬೀಲ್ನನ್ನು ತಮಿಳುನಾಡಿನಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ತ್ರಿಶೂರ್ ಮೂಲ ಘಟಕದ ಐಸಿಸ್ ಉಗ್ರ ಸಂಘಟನೆಯ ನಾಯಕನಾಗಿದ್ದು, ಪೊಲೀಸರು ಈತನಿಗಾಗಿ ಹುಡುಕಾಟ ನಡೆಸಿದ್ದರು. ಸದ್ಯದಲ್ಲೇ ಕೇರಳದಲ್ಲಿ ದುಷ್ಕೃತ್ಯ ನಡೆಸಲು ಈತ ಸಂಚು ನಡೆಸಿದ್ದ. ಈ ವಿಷಯ ಹೊರಬೀಳುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ.
ತಮಿಳುನಾಡಿನಲ್ಲಿ ತಲೆಮರೆಸಿಕೊಂಡು ವಿದೇಶಕ್ಕೆ ಹಾರುವ ಪ್ಲಾನ್ ಮಾಡಿದ್ದ. ಅಷ್ಟರೊಳಗೆ ಎನ್ಐಎ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ನಕಲಿ ದಾಖಲೆಗಳನ್ನು ಬಳಸಿಕೊಂಡು ನೇಪಾಳಕ್ಕೆ ಹೋಗಲು ಎಲ್ಲ ರೀತಿಯ ಸಿದ್ಧತೆ ಮಾಡಿದ್ದ. ಸತ್ಯಮಂಗಲಂ ಬಳಿಯ ಅಡಗುತಾಣದಿಂದ ನಬೀಲ್ನನ್ನು ಬಂಧಿಸಲಾಗಿದೆ.
ರಾಜ್ಯದಲ್ಲಿ ಡಯಾಯಿತಿ, ಅಕ್ರಮ ಚಟುವಟಿಕೆಗಳನ್ನು ನಡೆಸಿ ಜನರ ಬಳಿ ಹಣ ಕಿತ್ತು ಐಸಿಸ್ ಚಟುವಟಿಕೆಗಳನ್ನು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.