ಹೊಸದಿಗಂತ ವರದಿ ಪುತ್ತೂರು:
ಬಡಗನ್ನೂರು ಗ್ರಾಮದ ಕುಡ್ಕಾಡಿಯ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಮೂವರನ್ನು ಕಟ್ಟಿ ಹಾಕಿ, ಚಿನ್ನಭಾರಣ ಹಾಗೂ ನಗದು ಕಳವು ಮಾಡಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರು ಪ್ರಸಾದ್ ಅವರ ಮನೆಯಲ್ಲಿ ಈ ದರೋಡೆ ನಡೆದಿದೆ.
ಮನೆಯಲ್ಲಿ ಗುರುಪ್ರಸಾದ್, ಅವರ ತಾಯಿ, ಮನೆಯ ಕೆಲಸದವರು ಇರುವ ವೇಳೆ ರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸುಮಾರು 10 ಮಂದಿ ದರೋಡೆಕೋರರು ಇದ್ದರು ಎನ್ನಲಾಗಿದೆ. ಅಲ್ಲದೆ 25 ಪವನ್ ಚಿನ್ನ, 30 ಸಾವಿರ ನಗದು ಕಳವಾಗಿದೆ ಎನ್ನಲಾಗಿದೆ. ಪೊಲೀಸ್ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.