ಉತ್ತರಪ್ರದೇಶದಲ್ಲಿ ರೈಲ್ವೆ ನಿಲ್ದಾಣದ ಶೆಡ್ ಕುಸಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತಪ್ರದೇಶದ ರೈಲು ನಿಲ್ದಾಣದಲ್ಲಿ ಟಿನ್ ಶೆಡ್ ಏಕಾಏಕಿ ಕುಸಿದಿದ್ದು, ಅದರಡಿ ನಿಂತಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಸಂಭಾಲ್ ಜಿಲ್ಲೆಯ ಚಂದೌಸಿ ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಾ ಶೆಡ್ ಬಳಿ ನಿಂತಿದ್ದಾರೆ. ಈ ವೇಳೆ ಟಿನ್ ಶೆಡ್ಡ ಅಲುಗಾಡಿದೆ. ಹೆದರಿದ ಪ್ರಯಾಣಿಕರು ಓಡಿದ್ದಾರೆ. ಕೆಲವರು ಓಡುವ ಮುನ್ನವೇ ಶೆಡ್ ಅವರ ತಲೆಯ ಮೇಲೆ ಬಿದ್ದಿದೆ.

ಈ ಘಟನೆಯಲ್ಲಿ ತಂದೆ ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಸರ್ಕಾರಿ ರೈಲ್ವೆ ಪೊಲೀಸರು ಆಗಮಿಸಿದ್ದು, ಪ್ರಯಾಣಿಕರ ಸಹಾಯದಿಂದ ಅವಶೇಷಗಳನ್ನು ತೆಗೆದು, ಸಿಲುಕಿದ್ದವರನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here